ಮೋದಿಯತ್ತ ಮೊಬೈಲ್‌ ಎಸೆದ ಅಭಿಮಾನಿ

0
18

ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ಕಿಕ್ಕಿರಿದು ಸೇರಿದ್ದ ಜನರು ರಸ್ತೆ ಬದಿಗೆ ನಿಂತು ಹೂವಿನ ಸುರಿಮಳೆಗೈದಿದ್ದಾರೆ. ಆದರೆ, ಇದರ ಮಧ್ಯೆ ಮೋದಿ ಅಭಿಮಾನಿಯೊಬ್ಬ ಹೂವು ಎಸೆಯುವುದರ ಜತೆಗೆ ತನ್ನ ಮೊಬೈಲ್‌ ಕೂಡ ಎಸೆದಿದ್ದಾನೆ.
ರೋಡ್‌ ಶೋ ನಡೆದಿರುವ ಸಂದರ್ಭದಲ್ಲಿ ಏಕಾಏಕಿ ಏನೋ ಒಂದು ವಸ್ತು ಬಿದ್ದಿದೆ. ಅದು ಕೂಡ ಪ್ರಧಾನಿ ಸನಿಹದಲ್ಲಿಯೇ ಎಸೆದಿದ್ದಾನೆ ಎಂದು ಕೆಲ ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅದು ಮೊಬೈಲ್‌ ಎಂದು ಖಚಿತಗೊಂಡ ಬಳಿಕ ಭದ್ರತಾ ಸಿಬ್ಬಂದಿ ನಿರಾಳರಾಗಿದ್ದಾರೆ.

Previous articleವಿದ್ಯುತ್‌ ತಗುಲಿ ವ್ಯಕ್ತಿ, ಸಿಡಿಲು ಬಡಿದು ಆಕಳು ಸಾವು
Next articleನಮ್ಮದು ಜನಕಲ್ಯಾಣ ಕೇಂದ್ರಿತ ಪ್ರಣಾಳಿಕೆ: ಸಿಎಂ