ಕಳ್ಳನ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

0
11

ಚಿಕ್ಕೋಡಿ: ಮೂರು ಮನೆ ಕಳ್ಳತನ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದು, ೭ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಹಾರಾಷ್ಟ್ರದ ಕೊಲ್ಲಾಪುರದ ವಿಶಾಲ ನರಸಿಂಗ ಶೇರಖಾನೆ ಬಂಧಿತ ಆರೋಪಿ. ೪-೬-೨೦೨೩ರಂದು ಹೊಸೂರಿನ ಪಾರೇಶ ಭರಮಪ್ಪ ಅಕ್ಕತಂಗೇರಹಾಳ ಮನೆಯ ಬೀಗ ಮುರಿದು ೧.೧೬ ಲಕ್ಷ ಮೌಲ್ಯದ ಚಿನ್ನಾಭರಣ, ೩೨ ಸಾವಿರ ನಗದು ದೋಚಿರುವ ಬಗ್ಗೆ ಯಮಕನಮರಡಿ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಗೋಕಾಕ ಡಿವೈಎಸ್ಪಿ ಮುಲ್ಲಾ ನೇತೃತ್ವದಲ್ಲಿ ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ ಮತ್ತು ಪಿಎಸ್‌ಐ ಶಿವು ಮಣ್ಣಿಕೇರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೊಲ್ಲಾಪುರದ ವಿಶಾಲ ಶೇರಖಾನೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಮಕನಮರಡಿ ಠಾಣೆ ವ್ಯಾಪ್ತಿಯ ಉಳ್ಳಾಗಡ್ಡಿ-ಖಾನಾಪುರದಲ್ಲಿ ಎರಡು ಮನೆ, ಹೂಸೂರು ಗ್ರಾಮದಲ್ಲಿ ಒಂದು ಮನೆ ಸೇರಿ ಮೂರು ಮನೆಗಳ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ಒಂದು ಕಾರು, ಇತರ ವಸ್ತುಗಳು ಹಾಗೂ ೧೨೨.೫ ಗ್ರಾಂ ತೂಕದ ಚಿನ್ನಾಭರಣ ೬೪೦ ಗ್ರಾಂ ಬೆಳ್ಳಿಯ ಆಬರಣ ವಶಕ್ಕೆ ಪಡೆದುಕೊಂಡಿದ್ದಾರೆ

Previous articleಚೆನ್ನೈ-ಮೈಸೂರು ವಂದೇ ಭಾರತ್ ರೈಲಿಗೆ ಕಲ್ಲು
Next articleಯಶಸ್ವಿ ಉಡಾವಣೆ: ನಿಗದಿತ ಕಕ್ಷೆ ಸೇರಿದ ಚಂದ್ರಯಾನ-3