ಮುಸ್ಲಿಮರ ಗೆಲುವಿಗೆ ನಾನೇ ಮುಂದಾಳತ್ವ ವಹಿಸುವೆ

0
15
mb patil

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಸಿಗಬೇಕು. ಅಷ್ಟೇ ಅಲ್ಲ ಅವರ ಗೆಲುವಿಗಾಗಿ ನಾನೇ ಮುಂದಾಳತ್ವ ವಹಿಸುವೆ. ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಗೆದ್ದಿರುವ ಯತ್ನಾಳರು ಈ ಬಾರಿ ಅದು ಹೇಗೆ ಗೆದ್ದು ಬರುತ್ತಾರೋ ನೋಡೋಣ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಯತ್ನಾಳರ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸೇರಿದಂತೆ ಅನೇಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಯತ್ನಾಳರು ಮೊದಲು ವಿಜಯಪುರ ನಗರದಿಂದ ಗೆದ್ದು ಬರಲಿ ನೋಡೋಣ ಎಂದು ಸವಾಲು ಹಾಕಿದರು. ಈ ಬಾರಿ ವಿಜಯಪುರ ನಗರದಿಂದ ಮುಸ್ಲಿಂ ಅಭ್ಯರ್ಥಿ ಶಾಸಕನಾಗುವ ನಿಟ್ಟಿನಲ್ಲಿ ನಾನೇ ಸಂಪೂರ್ಣ ಮುಂದಾಳತ್ವ ವಹಿಸುವೆ, ಈ ಬಾರಿ ಮುಸ್ಲಿಂರು ಶಾಸಕರಾಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

Previous articleಡಿ. 3ರಂದು ಬೆಳಗಾವಿಗೆ ಮಹಾಸಚಿವರು: ಅಧಿಕೃತ ವೇಳಾಪಟ್ಟಿ ಪ್ರಕಟ
Next articleಗಡಿ ಕ್ಯಾತೆ, ಮಹಾರಾಷ್ಟ್ರಕ್ಕೆ ತಿರುಗುಬಾಣ