ಮೀಸಲಾತಿ ಹೆಚ್ಚಳ, ಒಂದು ಹಂತ ಮಾತ್ರ ಪೂರ್ಣ: ಸತೀಶ್ ಜಾರಕಿಹೊಳಿ

0
19
Satish Jarkiholi

ಬೆಳಗಾವಿ: ನಾಗಮೋಹನ ದಾಸ್ ವರದಿಯಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು ಮೀಸಲಾತಿ ಹೆಚ್ಚಳ ಒಟ್ಟು ಕಾರ್ಯದ ಕಾಲು ಭಾಗ ಮಾತ್ರ ಪೂರ್ಣವಾದಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕನ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ಸಂಪುಟ ಸಭೆ ನಂತರ ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಒಪ್ಪಿಗೆ, ಲೋಕಸಭೆಯಲ್ಲಿ ಒಪ್ಪಿಗೆ ನಂತರ ಅಂತಿಮವಾಗಿ ರಾಷ್ಟ್ರಪತಿ ಅಂಕಿತ ಸಿಕ್ಕಾಗ ಮಾತ್ರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಇನ್ನೂ ನಾಲ್ಕು ಬಾರಿ ಸಿಹಿ ಹಂಚಿದರಷ್ಟೇ ಕಾಯ್ದೆ ಜಾರಿಯಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

Previous articleಆರ್‌ಎಸ್‌ಎಸ್ ಮುಖಂಡರ ಮೇಲೆ ಹಲ್ಲೆ: ರಟ್ಟಿಹಳ್ಳಿಯಲ್ಲಿ ಬಿಗುವಿನ ವಾತಾವರಣ
Next articleನಮ್ಮ ಸರ್ಕಾರದಿಂದಲೇ ಮಹಾದಾಯಿ ಯೋಜನೆ ಜಾರಿ: ಕಟೀಲ್