ಮಾಡಾಳ್ ಮಿಸ್ಸಿಂಗ್ ಪೋಸ್ಟರ್

0
13
ಮಿಸ್ಸಿಂಗ್‌ ಅಭಿಯಾನ

ಬೆಂಗಳೂರು: ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಾಡಾಳ್ ವಿರೂಪಾಕ್ಷ ಅವರ ಕಾಣೆಯಾದ ಪೋಸ್ಟರ್‌ಗಳನ್ನು ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ಹಾಕಿರುವುದು ಕಂಡುಬಂದಿದೆ. ಕೆಎಸ್‌ಡಿಎಲ್‌ ಟೆಂಡರ್‌ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಪೋಸ್ಟರ್‌ ಅಭಿಯಾನ ಶುರುವಾಗಿದೆ. ಬೆಂಗಳೂರಿನ ಹಲವೆಡೆ ʼಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಲಾಗಿದೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ ಎಂದು ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ.

Previous articleಕಾಂಗ್ರೆಸ್‌ ಸೇರ್ಪಡೆಯಾದ ಇಬ್ಬರು ಮಾಜಿ ಶಾಸಕರು
Next articleರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಯಡಿಯೂರಪ್ಪ ವಿಶ್ವಾಸ