ಮಹಾಮೇಳಾವ್: ನಾಡದ್ರೋಹಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪೊಲೀಸರು ಯಶಸ್ವಿ

0
117
ಗಡಿ ತಡೆ

ಬೆಳಗಾವಿ: ಗಡಿನಾಡ ಬೆಳಗಾವಿ ಇತಿಹಾಸದಲ್ಲಿಯೇ ಮೊದಲ ಬಾರಿ ಮಹಾಮೇಳಾವ್ ನಡೆಸಲು ಉದ್ದೇಶಿಸಿದ್ದ ನಾಡದ್ರೋಹಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಟಿಳಕವಾಡಿ ವ್ಯಾಕ್ಸಿನ್ ಡಿಪೊ ಬಳಿ ನಾಡದ್ರೋಹಿಗಳು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದರು. ಇಂದು ಬೆಳಿಗ್ಗೆ ವ್ಯಾಕ್ಸಿನ್ ಡಿಪೊ ಬಳಿ ಅನುಮತಿ ಇಲ್ಲದೇ ವೇದಿಕೆ ಹಾಕಲು ಮುಂದಾಗಿದ್ದಾಗ ಪೊಲೀಸರು ಅದನ್ಬು ತೆರವುಗೊಳಿಸಿದರು.
ಎಡಿಜಿಪಿ ಅಲೋಕ ಕುಮಾಡ, ಡಿಸಿಪಿ ರವೀಂದ್ರ ಗಡಾದಿ ಮತ್ತಿತರರು ಖಡಕ್ ಎಚ್ಚರಿಕೆ ನೀಡಿ‌, ವೇದಿಕೆ ತೆರವುಗೊಳಿಸಿ ಅದನ್ನು ತಮ್ಮ‌ವಶಕ್ಕೆ ತೆಗೆದುಕೊಂಡರು. ಇದು ಒಂದು ಹಂತಕ್ಕೆ ಬರುತ್ತಿದ್ದಂತೆ ಸರಿತಾ ಪಾಟೀಲ ನೇತೃತ್ವದಲ್ಲಿ ಬೆರಳೆಣಿಕೆಯಷ್ಡು ಮಹಿಳೆಯರು ಘೋಷಣೆ ಕೂಗುತ್ತ ಬಂದಾಗ ಒಂದಿಷ್ಟು ಗೊಂದಲ ಸೃಷ್ಟಿಯಾಯಿತು. ಆದರೆ ಅವರನ್ನು ನಡು ರಸ್ತೆಯಲ್ಲಿ ಅಡ್ಡಗಟ್ಟಿದ ಪೊಲೀಸರು ಪೊಲೀಸ ವಾಹನದಲ್ಲಿ ಕರೆದುಕೊಂಡು ಹೋದರು. ಇದಕ್ಕೂ ಮುನ್ನ ಎರಡನೇ ಗೇಟ್‌ ಬಳಿ ಇರುವ ದಾರಿಯಲ್ಲಿ ದ್ವಿಚಕ್ರ ವಾಹನದ ಮೇಲೆ ಬಂದ ಕೆಲ ನಾಡದ್ರೋಹಿಗಳು ಪೊಲೀಸರನ್ನು ಕಂಡ ಕೂಡಲೇ ವಾಪಸ್ಸು ಹೋದರು. ಕ್ಯಾಮೆರಾ ಮುಂದೆ ತೋರಿಕೆಗೆ ಎನ್ನುವಂತೆ ವಿರೋಧ ವ್ಯಕ್ತಪಡಿಸಿದ ದ್ರೋಹಿಗಳು ಅರಚಾಟ ಮಾಡುವ ನಾಟಕ ಕೂಡ ಮಾಡಿದರು.
ವ್ತಾಕ್ಸಿನ ಡಿಪೊ ಬಳಿ ಮಹಾಮೇಳಾವ್ ನಡೆಸಲು ಉದ್ದೇಶಿಸಿದ್ದ ಮೇಳಾವ್ ಕಡೆಗೆ ಯಾರೂ ಹೋಗದ ಹಾಗೆ ಬ್ಯಾರಿಕೇಡಗಳನ್ನು ಹಾಕಿದ್ದರು. ಅದನ್ನು ದಾಟಿ ಹೋಗಲು ಅವಕಾಶವೇ ಇಲ್ಲ.
ಮತ್ತೊಂದು ಕಡೆಗೆ ನಿಪ್ಪಾಣಿಯ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಶಿವಸೇನೆಯಯವರನ್ನು ಅಲ್ಲಿಯೇ ತಡೆಯುವಲ್ಲಿ ಜಿಲ್ಲಾ ಪೊಲೀಸರು‌ ಯಶಸ್ವಿಯಾಗಿದ್ದಾರೆ

Previous articleಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನ-ಕರ್ನಾಟಕ ಪೊಲೀಸರಿಂದ ತಡೆ
Next articleವಿಧಾನಸಭೆಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ವಿರೋಧ: ಕಾಂಗ್ರೆಸ್‌ನಿಂದ ಪ್ರತಿಭಟನೆ