ಮಹಾಮೇಳಾವ್‌ಗೆ ನುಗ್ಗುತ್ತೇವೆ: ಕರವೇ ಎಚ್ಚರಿಕೆ

0
26


ಬೆಳಗಾವಿ: ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್‌ನವರಿಗೆ ಮಹಾಮೇಳಾವ್ ನಡೆಸಲು ಅನುಮತಿ ಕೊಟ್ಟರೆ ಕರವೇ ಸಹಿಸಲ್ಲ ಎಂದು ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಅವಿಭಾಜ್ಯ ಅಂಗ ಎಂದು ಕರೆಯಿಸಿಕೊಳ್ಳುವ ಬೆಳಗಾವಿಯಲ್ಲಿ ಕನ್ನಡಿಗರಿಗೆ ಕನ್ನಡ ಬಾವುಟ ಹಾರಿಸಲು ಪೊಲೀಸರು ಅನುಮತಿ ಕೊಡಲಿಲ್ಲ. ಆದ್ದರಿಂದ ನಾಡದ್ರೋಹಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಮಹಾಮೇಳಾವ್‌ಗೆ ಅನುಮತಿ ನೀಡಬಾರದು. ಒಂದು ವೇಳೆ ಅವರಿಗೆ ಅನುಮತಿಸಿದರೆ ಕರವೇ ಕಾರ್ಯಕರ್ತರು ಅವರ ಸ್ಥಳಕ್ಕೆ ನುಗ್ಗಬೇಕಾದ ಪರಿಸ್ಥಿತಿ ಬರಬಹುದು, ಅದರಿಂದಾಗುವ ಅನಾಹುತಕ್ಕೆ ಪೊಲೀಸ್ ಇಲಾಖೆ ಹೊಣೆ ಎಂದು ಗುಡುಗಿದ್ದಾರೆ.

Previous articleಹಿಮಾ(ಚಂಚಲ)-ಸುಖ್ವಿಂದರ್ ಸಿಂಗ್ ಸುಖು ಅಚಲ?
Next articleಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ