ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ

0
19

ಮದ್ದೂರು: ತಾಲೂಕಿನ ಗೆಜ್ಜಲಗೆರೆಯ ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮೆಗಾ ಡೈರಿ ಮೊದಲ ಅಂತಸ್ತಿನ ತುಪ್ಪ ಮತ್ತು ಕೋವಾ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತುಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿದೆ
ಭಾನುವಾರ ಬೆಳ್ಳಿಗ್ಗೆ ಏಳರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೌಕರರು ಹೋಗಿ ನೋಡಿದಾಗ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು ನಂದಿಸುವ ಪ್ರಯತ್ನ ಮಾಡಿದರು ಆದರೆ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಎಲ್ಲೆಡೆ ಆವರಿಸಿದ್ದರಿಂದ
ಬಾಯ್ಲರ್ ಗಳು ಸ್ಪೋಟಗೊಂಡಿರುವ ಸಾಧ್ಯತೆ ಹೆಚ್ಚಾಗಿದೆ.
ಮೆಗಾ ಡೈರಿ ಕಟ್ಟಡದಲ್ಲಿ ಬೆಂಕಿ ಧಗ ಧಗಿಸಿ ಹೊತ್ತಿ ಉರಿದಿದ್ದು ಇದರಿಂದ ಮನ್ ಮುಲ್ ಆವರಣದಲ್ಲಿ ದಟ್ಟ ಹೊಗೆಆವರಿಸಿದೆ
ಬೆಂಕಿ ನಂದಿಸಲು ಸ್ಥಳೀಯ ನೌಕರರು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದು ಕೇಂದ್ರ ಸಚಿವ ಅಮಿತ್ ಶಾ ಕಳೆದ ವರ್ಷ ಮೆಗಾ ಡೈರಿ ಕಟ್ಟಡಕ್ಕೆ ಚಾಲನೆ ನೀಡಿದ್ದರು.
ಇದೀಗ ಬೆಂಕಿ ಅವಘಡದಿಂದ ಬಾರಿ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.

Previous articleಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ಮತ್ತೆ ಶುರು
Next articleನಾಳೆ ಜನತಾ ದರ್ಶನ ಇಲ್ಲ