ದಣಿವಾರಿಸಿಕೊಂಡ ಶಿವಲೀಲಾ ಕುಲಕರ್ಣಿ ಹಾಗೂ ಮಕ್ಕಳು: ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪತಿ ವಿನಯ ಕುಲಕರ್ಣಿ ಪರವಾಗಿ ಕೆಲ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಾದ್ಯಂತ ಓಡಾಡಿದ್ದ ಶಿವಲೀಲಾ ಕುಲಕರ್ಣಿ ಮತದಾನ ನಡೆದ ಮರುದಿನ ಗುರುವಾರ ಮನೆ್ಯಲ್ಲಿಯೇ ಇದ್ದು, ಕುಟುಂಬದ ಸದಸ್ಯರೆಲ್ಲ ಒಂದೆಡೆ ಕುಳಿತು ಸಮಯ ಕಳೆದರು. ಕುಟುಂಬದ ಸದಸ್ಯರು ವಿನಯ ಅವರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತವಾಡಿದರು.
ಪುತ್ರಿಗೆ ಅಭ್ಯಾಸ ಹೇಳಿದ ಬಸವರಾಜ ಮಲಕಾರಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಮಲಕಾರಿ ಮತದಾನದ ಮರುದಿನ ರಿಲ್ಯಾಕ್ಸ್ ಮೂಡ್ ನಲ್ಲಿದ್ದರು. ಮನೆಯ ಸದಸ್ಯರೊಂದಿಗೆ ಸಮಯ ಕಳೆದ ಅವರು ಪುತ್ರಿಗೆ ಅಭ್ಯಾಸ ಹೇಳಿಕೊಟ್ಟರು.
ಅಭಿಮಾನಿಗಳೊಂದಿಗೆ ಕೂಲ್ ಆದ ಪ್ರಸಾದ ಅಬ್ಬಯ್ಯ : ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅವರು ಚುನಾವಣೆಯ ನಂತರ ಜೆ.ಕೆ. ಸ್ಕೂಲ್ ಹತ್ತಿರದ ತಮ್ಮ ನಿವಾಸದಲ್ಲಿ ಕುಟುಂಬದವರು, ಅಭಿಮಾನಿಗಳೊಂದಿಗೆ ಕೂಲ್ ಆಗಿ ಸಮಯ ಕಳೆದರು.
ಅಭಿಮಾನಿಗಳೊಂದಿಗೆ ಕಾಲ ಕಳೆದ ಪಾಟೀಲ್: ಕಳೆದ ಮೂರ್ನಾಲಕ್ಕು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರಾದ್ಯಂತ ಓಡಾಡಿದ್ದ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಗುರುವಾರ ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ನೆಂಟರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಕಾಲ ಕಳೆದ ಎಂ.ಆರ್. ಪಾಟೀಲ ಫುಲ್ ಕಾನ್ಫಿಡೆನ್ಸ್ ನಲ್ಲಿದ್ದಾರೆ.
ಪ್ರಿತಿಯ ಶ್ವಾನದೊಂದಿಗೆ ಕಾಲ ಕಳೆದ ಮಹೇಶ್ ಟೆಂಗಿನಕಾಯಿ : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ತಮ್ಮ ಗೋಕುಲ ರಸ್ತೆಯಲ್ಲಿರುವ ನಿವಾಸದಲ್ಲಿ ಕುಟುಂಬದವರು ಹಾಗೂ ಪ್ರೀತಿಯ ಶ್ವಾನದೊಂದಿಗೆ ಸಮಯ ಕಳೆದರು.
ಅಭಿಮಾನಿಗಳೊಂದಿಗೆ ಕಾಲ ಕಳೆದ ಜಗದೀಶ ಶೆಟ್ಟರ್ : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ತಮ್ಮ ನಿವಾಸದಲ್ಲಿ ಸಮಾನ ಮನಸ್ಕರು ಹಾಗೂ ಹಿರಿಯರು ಮತ್ತು ಅಭಿಮಾನಿಗಳೊಂದಿಗೆ ಕಾಲ ಕಳೆದರು.