ಭತ್ತದ ಗದ್ದೆಯಲ್ಲಿದ್ದ ಮೊಸಳೆ ಸೆರೆ

0
14

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಬಳಿ ಭತ್ತದ ಗದ್ದೆಯಲ್ಲಿ ಬುಧವಾರ ಕಾಣಿಸಿಕೊಂಡಿದ್ದ ಮೊಸಳೆಯನ್ನು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ತುಂಗಭದ್ರಾ ನದಿಯಿಂದ ಹೊರಗೆ ಬಂದ ಬೃಹತ್ ಮೊಸಳೆ ಭತ್ತದ ಗದ್ದೆಯಲ್ಲಿ ಓಡಾಡುತಿತ್ತು. ಇದರಿಂದ ಈ ಭಾಗದ ರೈತರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ ಹಗ್ಗದ ನೆರವಿನಿಂದ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಮೊಸಳೆಯನ್ನು ಹಿಡಿದು ಮತ್ತೆ ನದಿಗೆ ಬಿಡಲಾಗಿದೆ.

Previous articleಧಾರವಾಡ ಬಳಿ ಭೀಕರ ಅಪಘಾತ: ಐವರ ಸಾವು
Next articleಕಲ್ಯಾಣ ಕರ್ನಾಟಕ ಉತ್ಸವದ ಮೆರವಣಿಗೆಗೆ ಚಾಲನೆ