Home Advertisement
Home ತಾಜಾ ಸುದ್ದಿ ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ: ಇಬ್ರಾಹಿಂ

ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ: ಇಬ್ರಾಹಿಂ

0
112
ಇಬ್ರಾಹಿಂ

ರಾಜ್ಯದಲ್ಲಿ ಇನ್ನು ಬೊಮ್ಮಾಯಿ, ಸಿದ್ದರಾಮಯ್ಯ ಫಿಲ್ಮಂ ಓಡಲ್ಲ‌ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಹಾಸನದಲ್ಲಿ ಮಾಜಿ ಶಾಸಕ ದಿ. ಎಚ್.ಎಸ್. ಪ್ರಕಾಶ್ 71ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕಾಶ್ ಅವರಿಗಿದ್ದ ದೊಡ್ಡ ಹೃದಯ ಸ್ವರೂಪ್‌ನಲ್ಲೂ ಇದೆ. ದೊಡ್ಡ ಮನಸ್ಸು ನಿಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ದೇವೇಗೌಡರಿಗೆ ಇರುವ ಮನಸ್ಸೇ ಕುಮಾರಸ್ವಾಮಿ ಅವರಲ್ಲಿದೆ. ಅದಕ್ಕೆ ಅವರು ಮುಖ್ಯಮಂತ್ರಿಯಾದರು ಎಂದರು. ಇನ್ನು ರಾಜ್ಯದಲ್ಲಿ ಜೆಡಿಎಸ್ ಪರವಾದ ವಾತಾವರಣ ಇದೆ. ಜನರು ಕುಮಾರಸ್ವಾಮಿ, ದೇವೇಗೌಡರ ಪರವಾಗಿದ್ದಾರೆ. ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.