ಬೆಳಗಾಗುವುದರೊಳಗೆ ದಿಢೀರ್ ಶ್ರೀಮಂತನಾದ ಅಪರಿಚಿತ ವ್ಯಕ್ತಿ?

0
8

ದಾವಣಗೆರೆ: ಬೆಳಗಾಗುವುದರೊಳಗೆ ಅಪರಿಚಿತ ವ್ಯಕ್ತಿಯೊಬ್ಬ ದಿಢೀರ್ ಶ್ರೀಮಂತನಾಗಿರುವ ಸುದ್ದಿ ಕಾಡ್ಗಿಚ್ಚಿನಂತೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಹೌದು, ಮಾಯಕೊಂಡ ವಿಧಾನಸಭಾ (ಎಸ್ಸಿ ಮೀಸಲು) ಕ್ಷೇತ್ರದಲ್ಲಿ ಇಂತದೊಂದು ಸುದ್ದಿ ಜನರ ಬಾಯಿಯಿಂದ ಬಾಯಿಗೆ ಕಾಡಿಗೆ ಬಿದ್ದ ಬೆಂಕಿಯ ಕಾಡ್ಗಿಚ್ಚಿನಂತೆ ಹರಡುತ್ತಿದೆ.
ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಕಡೆಯವರು ಮತದಾರರಿಗೆ ಹಂಚಲು ಸ್ಥಳೀಯ ಮುಖಂಡರಿಗೆ ಮಧ್ಯರಾತ್ರಿ ಹಣವಿರುವ ಚೀಲದ ಮೂರು ಗಂಡುಗಳನ್ನು ಇಂತಹದೊಂದು ಸ್ಥಳಕ್ಕೆ ಹಾಕುತ್ತೇವೆ. ನೀವು ಬಂದು ತೆಗೆದುಕೊಂಡು ಮತದಾರರಿಗೆ ಹಂಚುವಂತೆ ಬುಧವಾರ ಮಧ್ಯರಾತ್ರಿ ಕೈ ಸನ್ನೆ ಮೂಲಕ ಮೂರು ಬೆರಳು ತೋರಿಸಿ ಸೂಚಿಸಿದ್ದಾರೆ ಎನ್ನಲಾಗಿದೆ.
ಅದರಂತೆ ಅವರು ಹಣವಿರುವ ಮೂರು ಚೀಲದ ಗಂಟುಗಳನ್ನು ಮಾಯಕೊಂಡ ಸಮೀಪದ ಪೆಟ್ರೋಲ್ ಬಂಕ್ ನ ಸ್ವಲ್ಪ ದೂರದ ರಸ್ತೆ ಬದಿಯಲ್ಲಿ ಆ ಮೂರು ಗಂಟುಗಳನ್ನು ಎಸೆದು ಹೋಗಿದ್ದಾರೆ. ಆದರೆ ಹಣವಿರುವ ಚೀಲದ ಗಂಟು ಎಸೆದು ಹೋಗುತ್ತಾರೆ ಎಂಬ ಸಂಗತಿ ಸ್ಥಳೀಯ ಮುಖಂಡರಿಗೆ ಅರ್ಥವಾಗಿಲ್ಲ. ನಮ್ಮ ಮುಖಂಡರು ಮೂರು ಬೆರಳು ಏಕೆ ತೋರಿಸಿದರು , ಹಣ ಕೊಡುತ್ತೇವೆ ಎಂದವರು ಹಿಂಗ್ ಬಂದು ಹಾಗೆಯೇ ಹೋದರು ಎಂದು ಆ ಮುಖಂಡರು ತಲೆ ಕೆರೆದುಕೊಳ್ಳುವುದರಲ್ಲಿಯೇ ಕಾಲ ಕಳೆದಿದ್ದಾರೆ.
ಆದರೆ ಹಂಚುವವರಿಗೆ ಸಿಗಬೇಕಾಗಿದ್ದ ಹಣದ ಗಂಟುಗಳು ದಾವಣಗೆರೆ ಕಡೆಯಿಂದ ಮಾಯಕೊಂಡಕ್ಕೆ ಬೈಕ್ ನಲ್ಲಿ ಹೋಗುವ ಸವಾರನ ಕಣ್ಣಿಗೆ ಬಿದ್ದಿವೆ. ಆ ಗಂಟಿನೊಳಗೆ ಎನ್ನಿವೆ ಎಂಬ ಅರಿವೆ ಇಲ್ಲದ ಅಪರಿಚಿತ ಬೈಕ್ ಸವಾರ ಅರೇ, ಇವು ಯಾವ ಗಂಟುಗಳು, ಯಾರು ಎಸೆದು ಹೋದರು ಎಂದು ಮೂರು ಗಂಟುಗಳನ್ನು ತೆಗೆದುಕೊಂಡು ಹೋಗಿದ್ದಾನೆ.
ಅಪರಿಚಿತ ಬೈಕ್ ಸವಾರನೊಬ್ಬ ಆ ಗಂಟಿನ ಚೀಲಗಳನ್ನು ತೆಗೆದುಕೊಂಡು ಹೋಗಿ ಸ್ವಲ್ಪ ಗಂಟೆಗಳ ನಂತರ ಆ ಮುಖಂಡರಿಗೆ ಫೋನ್ ಮಾಡಿ ನಾವು ಎಸೆದಿದ್ದ ಹಣದ ಮೂರು ಚೀಲದ ಗಂಟುಗಳು ಸಿಕ್ಕವಾ, ಆ ಹಣವನ್ನು ಮತದಾರರಿಗೆ ಹಂಚಿದೀರಾ ಎಂದು ಕೇಳಿದ್ದಾರೆ. ಅವರು ಹಣದ ಚೀಲ ಎಸೆದು ಹೋಗುವ ಅರಿವೇ ಇಲ್ಲದ ಸ್ಥಳೀಯ ಮುಖಂಡರು ನೀವು ಹಣ ಕೊಡ್ತೀರಾ ಎಂದು ನಿಮ್ಮ ದಾರಿಯನ್ನೇ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಆಗ ಪಕ್ಷದ ಮುಖಂಡರು ಎದ್ದನೋ, ಬಿದ್ದನೋ ಎಂದು ಓಡಿ ಬಂದು ಎಸೆದು ಹೋಗಿದ್ದ ಹಣದ ಚೀಲದ ಗಂಟುಗಳನ್ನು ತಡಕಾಡಿದರೂ , ಹಣ ಎಸೆದು ಹೋದ ಜಾಗದ ಗುರುತು ಬಿಟ್ಟರೆ ಮೂರು ಗಂಟಿನ ಹಣದ ಚೀಲಗಳು ಅವರ ಕಾಣಿಸುತ್ತಿಲ್ಲ.
ಒಂದು ಕ್ಷಣ ದಿಗಿಲು ಬಡಿದವರಂತೆ ಹಣ ಎಸೆದು ಹೋದವರಿದ್ದರೆ, ಹಣಕ್ಕಾಗಿ ಕಾಯುತ್ತಿದ್ದ ಸ್ಥಳೀಯ ಮುಖಂಡರು ಲಕ್ಷಾಂತರ ರೂಪಾಯಿ ಯಾರ ಕೈ ಸೇರಿತ್ತಪ್ಪಾ ಎಂದು ಕೈಕೈ ಇಸಿಕೊಂಡು ಹಣ ತೆಗೆದುಕೊಂಡು ಹೋದ ಆ ಅಪರಿಚಿತ ವ್ಯಕ್ತಿ ಬೆಳಗಾಗುವುದರೊಳಗೆ ದಿಢೀರ್ ಶ್ರೀಮಂತನಾದ ಎಂದು ಗೊಣಗಾಡಿದ್ದಾರೆ ಎಂಬ ಸುದ್ದಿ ಇಡೀ ಜಿಲ್ಲೆಯನ್ನೇ ಆವರಿಸಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Previous articleಪಕ್ಷೇತರ ಅಭ್ಯರ್ಥಿ ಚಿಹ್ನೆ ಬಾವುಟ ಹಾಕಿಕೊಂಡು ಮತಗಟ್ಟೆ ಆವರಣಕ್ಕೆ ಬಂದ ಅಭ್ಯರ್ಥಿ ಕಾರ್
Next articleಮತದಾನದ ಹಕ್ಕು ಚಲಾಯಿಸಿದ ಶತಾಯುಷಿಗಳು