ಬೀದರ್: ಟ್ರಕ್- ಆಟೋ ಮಧ್ಯೆ ಭೀಕರ ಅಪಘಾತ, ಮೃತರ ಸಂಖ್ಯೆ 7ಕ್ಕೇ ಏರಿಕೆ

0
17
ಬೀದರ

ಬೀದರ್‌ ಜಿಲ್ಲೆ ಚಿಟಗುಪ್ಪಾ ತಾಲ್ಲೂಕಿನ ಬೆಮ್ಮಳಖೇಡ ಬಳಿ ನಡೆದ ಅಪಘಾತದಲ್ಲಿ 7 ಜನ ಮೃತರಾಗಿ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತದಲ್ಲಿ ನಿನ್ನೆ(ಶುಕ್ರವಾರ) ಐವರು ಮೃತಪಟ್ಟಿದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು(ಶನಿವಾರ) ಇಬ್ಬರು ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಗ್ರಾಮದ ಬಳಿ ನಿನ್ನೆ ಐಷರ್ ಟ್ರಕ್ ಹಾಗೂ ಆಟೋ ನಡುವೆ ನಡೆದ ಭೀಕರ ಅಪಘಾತ ಸಂಭವಿಸಿತ್ತು.
ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡದ ಬಳಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಉಡಮನಳ್ಳಿಗೆ ಹೋಗುತ್ತಿದ್ದ ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಆಟೋದಲ್ಲಿದ್ದ ಐದು ಜನ ಕೂಲಿ ಕಾರ್ಮಿಕರು ಮೃತಪಟ್ಟಿದ್ದು, 08 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ, ಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಅಲೋಕ ಕುಲಕರ್ಣಿಗೆ ಲಂಡನ್‌ನಲ್ಲಿ `ಎಂಆರ್‌ಸಿಪಿ’ ಪದವಿ
Next articleಬೆಂಗಳೂರಿನ ರಸ್ತೆಗುಂಡಿಗೆ ಬಿದ್ದು ಬೈಕ್‌ ಸವಾರನ ಸ್ಥಿತಿ ಚಿಂತಾಜನಕ