ಬೆಂಗಳೂರು: ಕಾಂಗ್ರೆಸ್‌ನ ದೌರ್ಜನ್ಯದ ಪ್ರಕರಣಗಳಿಂದ ಪಕ್ಷದ ಕಾರ್ಯಕರ್ತರನ್ನು ರಕ್ಷಿಸಲು ಬಿಜೆಪಿ ಸಹಾಯವಾಣಿ ಆರಂಭ ಮಾಡಿದೆ. ಪಕ್ಷದ ಕಾರ್ಯಕರ್ತರಿಗೆ ಕಾನೂನು ನೆರವು ಕೊಡಲು ಇದು ನೆರವಾಗಲಿದೆ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕಾನೂನು ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೂರು ಜನರ ವಕೀಲರ ತಂಡ ನಮ್ಮ ಕಾರ್ಯಕರ್ತರ ಸಹಾಯಕ್ಕೆ ದಾವಿಸಲಿದೆ. ಸುಳ್ಳು ಕೇಸ್ ಹಾಕೋದು, ಹಿಂದುತ್ವದ ಪರ ಮಾತನಾಡುವವರ ಮೇಲೆ ಹಾಗೂ ಸರ್ಕಾರದ ವಿರುದ್ಧ ಪೋಸ್ಟ್ ಮಾಡಿದರೆ ಅಂತವರ ಮೇಲೆ ಸುಳ್ಳು ಕೇಸ್ ಹಾಕಿದರೆ ಅಥವಾ ಗಣಪತಿ ಹಬ್ಬ ಆಚರಣೆ ಮೆರವಣಿಗೆ ಮಾಡಲು ಬಿಡದೆ ಕೇಸ್ ಮಾಡಿದರೆ ಕಾರ್ಯಕರ್ತರಿಗೆ ಸಹಾಯವಾಣಿ ನೆರವು ನೀಡಲಿದೆ ಎಂದರು.