ಬಿಜೆಪಿಗೆ ಗುಡ್ ಬೈ ಹೇಳಲು ಜಗದೀಶ್ ಶೆಟ್ಟರ್ ಸನ್ನದ್ಧ

0
6
ಶೆಟ್ಟರ್‌

ಹುಬ್ಬಳ್ಳಿ: ಬಿಜೆಪಿಗೆ ಗುಡ್ ಬಾಯ್ ಹೇಳಲು ಜಗದೀಶ್ ಶೆಟ್ಟರ್ ಸನ್ನದ್ಧರಾಗಿದ್ದಾರೆ.
ನಿನ್ನೆಯಿಂದಲೇ ಹೈಕಮಾಂಡ್‌ಗೆ ಟಿಕೆಟ್‌ ಕುರಿತು ಸ್ಪಷ್ಟ ನಿರ್ಧಾರ ತಿಳಿಸುವಂತೆ ಬೆಳಗ್ಗೆ 11ರ ವರೆಗೆ ಗಡುವು ನೀಡಿದ್ದರು. ಇದಾದ ಮೇಲೆ ಶೆಟ್ಟರ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಶೆಟ್ಟರ ಮತ್ತೆ ಸಂಜೆ 6ರವರೆಗೆ ಗಡುವು ವಿಸ್ತರಿಸಿದ್ದರು. ಆದರೆ, ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವ ಹಿನ್ನಲೆಯಲ್ಲಿ ಬೇಸರಗೊಂಡ ಶೆಟ್ಟರ ರಾಜೀನಾಮೆಗೆ ಮುಂದಾಗಿದ್ದಾರೆ.
ಇಂದೇ ಬಿಜೆಪಿಗೆ ರಾಜೀನಾಮೆ ನೀಡಲು ಸ್ಪೀಕರ್ ಕಾಗೇರಿ ಭೇಟಿಗಾಗಿ ಅವರು ಶಿರಸಿಗೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ.

Previous articleನಟ ಚೇತನ್ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ
Next articleಕಾಡು ಸೇರದೆ ಮರಳಿ ಒಂಟಿಯಾದ ಮರಿ ಆನೆ