ಪೂಜೆಗೆ ಹೋಗಿದ್ದ ಮಹಿಳೆಯ ಮಂಗಳಸೂತ್ರ ದೋಚಿ ಪರಾರಿ

0
6

ಹುಬ್ಬಳ್ಳಿ: ದಸರಾ ಅಂಗವಾಗಿ ಬನ್ನಿ ಮಹಾಕಾಳಿ ಪೂಜೆ ಸಲ್ಲಿಸಲು ಹೋಗುವಾಗ ಮಂಗಳಸೂತ್ರ ದೋಚಿ ಪರಾರಿಯಾಗಿರುವ ಘಟನೆ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೋಕುಲ ರಸ್ತೆ ಡಾಲರ್ಸ್ ಕಾಲೋನಿಯಲ್ಲಿ ಬೈಕ್ ಮೇಲೆ ಬಂದ ದುಷ್ಕರ್ಮಿ ಕೋಟಿಲಿಂಗೇಶ್ವರ ನಗರದ ಲಲಿತಾ ಎಂಬುವರ ಕೊರಳಲ್ಲಿದ್ದ ೪೦ ಸಾವಿರ ಮೌಲ್ಯದ ೧೦ ಗ್ರಾಂ. ಮಂಗಳ ಸೂತ್ರ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಖಾಸಗಿ ಬಸ್ ಮಗುಚಿ 12 ಜನರಿಗೆ ಗಾಯ
Next articleರಾಜ್ಯಾಧ್ಯಕ್ಷರಾಗಿ ಹೆಚ್​ ಡಿ ಕುಮಾರಸ್ವಾಮಿ