ಪರಿಸರ ದಿನಕ್ಕೆ ನಗರಸಭೆ ಅಪಮಾನ: ಹಿಂದಿನ ದಿನವೇ ಮರಕ್ಕೆ ಕೊಡಲಿಪೆಟ್ಟು

0
11

ಇಳಕಲ್: ಜೂನ್ ಐದರಂದು ನಡೆಯುವ ಪರಿಸರ ದಿನದ ಬಗ್ಗೆ ಜಾಗೃತಿ ಮೂಡಿಸಬೇಕಾದ ನಗರಸಭೆ ರವಿವಾರ ಕಚೇರಿ ಆವರಣದಲ್ಲಿನ ಮರಕ್ಕೆ ಕೊಡಲಿಪೆಟ್ಟು ನೀಡಿದೆ. ನಗರಸಭೆ ಆವರಣದಲ್ಲಿ ಇದ್ದ ಸುಬಾಬುಲ್ ಮರವನ್ನು ಕಡಿದಿರುವ ನಗರಸಭೆಯ ಸಿಬ್ಬಂದಿ ಪರಿಸರ ಪ್ರೇಮಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಇಡೀ ರಾಜ್ಯಾದ್ಯಂತ ಪರಿಸರ ಉಳಿಸಿ ಬೆಳೆಸಿ ಎಂಬ ಮಾತುಗಳನ್ನು ಹೇಳುವ ಪರಿಸರ ದಿನಾಚರಣೆಯ ಮುನ್ನಾ ದಿನ ನಡೆದಿರುವ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

Previous articleಗೋವುಗಳನ್ನು ಏಕೆ ಕಡಿಯಬಾರದು ಎಂಬ ಸಚಿವರ ಹೇಳಿಕೆ ಖಂಡನೀಯ
Next articleಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ