Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರು: ವ್ಯಕ್ತಿ ಆತ್ಮಹತ್ಯೆ ಶಂಕೆ

ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರು: ವ್ಯಕ್ತಿ ಆತ್ಮಹತ್ಯೆ ಶಂಕೆ

0

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ೬೭ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಮಧ್ಯಾಹ್ಮ ಪತ್ತೆಯಾಗಿದ್ದು, ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಕಾರನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ಗೋಕುಲ್ ಫಾರ್ಮ್ ನಿವಾಸಿ, ಬಿ. ಎಸ್. ಶಂಕರ ಗೌಡ ಎಂಬವರ ಪುತ್ರ ಪ್ರಸನ್ನ (೩೭) ಎಂಬವರ ಗುರುತಿನ ಕಾರ್ಡ್‌ಗಳು ಪತ್ತೆಯಾಗಿದೆ. ಕಾರಿನ ಕೀ ಕೂಡಾ ಕಾರಿನಲ್ಲೇ ಪತ್ತೆಯಾಗಿದೆ. ಕಾರು ಚಲಾಯಿಸಿಕೊಂಡ ವ್ಯಕ್ತಿ ಯಾರು, ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ತಿಳಿದು ಬಂದಿಲ್ಲ.
ಕಾರಿನಲ್ಲಿ ಕಂಡು ಬಂದ ಗುರುತಿನ ಚೀಟಿಯ ಆಧಾರದ ಮೇಲೆ ಆ ವ್ಯಕ್ತಿಯ ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಗಿದೆ. ಮನೆ ಮಂದಿ ಬಂದ ಬಳಿಕ ವಾಸ್ತವಾಂಶ ತಿಳಿಯಬಹುದಾಗಿದೆ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
೨೦೧೯ರಲ್ಲಿ ಖ್ಯಾತ ಉದ್ಯಮಿ ಕಾಫಿ ಡೇಯ ಸಿದ್ಧಾರ್ಥ್‌ರವರು ಇದೇ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು, ಆ ನಂತರ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗಿದ್ದರಿಂದ ಸೇತುವೆಗೆ ಕಬ್ಬಿಣದ ಬೇಲಿ ಹಾಕಲಾಗಿತ್ತು

Exit mobile version