ನುಡಿ ಜಾತ್ರೆ: ಮೆರವಣಿಗೆಯಲ್ಲಿ ಅಭಿಮಾನಿಗಳ ಸಂಭ್ರಮ

0
18
ಹಾವೇರಿ

ಹಾವೇರಿ : ನಾಡು ನುಡಿ ಅಭಿಮಾನದ ಗೀತೆಗಳು… ಕಲೆ ಸಂಪ್ರದಾಯ ಸಾರುವ ನೃತ್ಯ… ಎಲ್ಲರ ಬಾಯಲ್ಲೂ ಕನ್ನಡ ಮಾತೆಗೆ ಜೈ…
ನುಡಿ ಜಾತ್ರೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಕಂಡ ನೋಟ. ಪಾಲ್ಗೊಂಡ ಕಲಾ ತಂಡಗಳು ಒಂದುಕ್ಕಿಂತ ಒಂದು ಗಮನ ಸೆಳೆದರೆ ಸಾರೋಟದಲ್ಲಿ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಕುಳಿತು ಸಾಗುತ್ತಿದ್ದ ನೋಟ ವಿಶೇಷವಾಗಿತ್ತು.
ವೀರಗಾಸೆ, ಕನ್ನಡ ಕವಿಗಳು, ಸಾಹಿತಿಗಳ ಭಾವಚಿತ್ರ, ನಾಡು ನುಡಿ ಅಭಿಮಾನ ಮೆರೆದ ಚಲನ ಚಿತ್ರ ನಟರ ಭಾವಚಿತ್ರಗಳನ್ನು ಹಿಡಿದ ಅಭಿಮಾನಿಗಳು ಗಮನ ಸೆಳೆದರು.
ಶಾಲಾ ಮಕ್ಕಳು ನಾಡಿನ ಸಂಸ್ಕೃತಿ ಬಿಂಬಿಸುವ ವಿವಿಧ ಪೋಷಾಕಿನಲ್ಲಿ ನೃತ್ತ ಮಾಡಿದರು.

ಗಡಿ ಜಿಲ್ಲೆರಾಯಚೂರಿನಿಂದ ಬಂದಿದ್ಸ ಕನ್ನಡ ಅಭಿಮಾನಿಗಳಾದ ವಿಶ್ವನಾಥ್ ಮತ್ತು ನಿಖಿಲ್ ಅವರು ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಗಮನ ಸೆಳೆದರು.
Previous articleಯಾಲಕ್ಕಿ ನಾಡ ಕನ್ನಡೋತ್ಸವ ವಿಶೇಷ ಪುರವಣಿ ಬಿಡುಗಡೆ
Next article86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ : ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ