ನಾಲಿಗೆ ಮೇಲೆ ಹಿಡಿತವಿರಲಿ-ಕ್ಷೇತ್ರದ ಜನರೇ ನನ್ನ ದಮ್ಮು, ತಾಕತ್ತು

0
15

ಕುಷ್ಟಗಿ: ಶಾಸಕ ಬಯ್ಯಾಪುರ ನನ್ನ ತಾಕತ್ತು, ದಮ್ಮಿನ ಬಗ್ಗೆ ಮಾತನಾಡಿದ್ದಾರೆ. ನನ್ನ ಕ್ಷೇತ್ರದ ಜನರೇ ನನ್ನ ತಾಕತ್ತು, ದಮ್ಮು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ತಿರುಗೇಟು ನೀಡಿದ್ದಾರೆ.
ಇಲ್ಲಿನ ಶಾಕಾಪುರ ರಸ್ತೆಯಲ್ಲಿ ಅಂಜನಾದ್ರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯ್ಯಾಪುರವರ ದಮ್ಮು ತಾಕತ್ತು ಏನಿದ್ದರೂ ಸಹ ಲಿಂಗಸೂಗೂರು ಮತ್ತು ಸಂಬಂಧಿಕರು ಮಾತ್ರ ಆಗಿದ್ದಾರೆ. ಸೋಲಿಲ್ಲದ ಸರದಾರ ಎಂಬ ಬಿರುದು ಪಡೆದಿದ್ದ ಬಯ್ಯಾಪುರ ಅವರನ್ನು ಕುಷ್ಟಗಿ ಜನತೆ ಹಿಂದೆ ತೋರಿಸುವ ಮೂಲಕ ತಮ್ಮ ತಾಕತ್ತನ್ನು ತೋರಿಸಿದ್ದಾರೆ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದರು.
ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ
1300 ರೂ. ವೆಚ್ಚದ ಕಾಮಗಾರಿಗೆ ಸಂಬಂಧಿಸಿದಂತೆ ಶಾಸಕ ಬಯ್ಯಾಪುರ, ಅವರ ಸಂಬಂಧಿಕರಿಗೆ ಗುತ್ತಿಗೆ ಕೊಡಿಸಿದ್ದಾರೆ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅವರು ಮಾಡಿರುವ ಕಾಮಗಾರಿಗಳ ಬಗ್ಗೆ ಸಿಬಿಐಗೆ ಒಪ್ಪಿಸುವ ಅವಶ್ಯಕತೆ ಇಲ್ಲ. ಮುಂದಿನ ದಿನಮಾನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಬಯ್ಯಾಪುರ ಅವರ ಸಂಬಂಧಿಕರು ಪಡೆದುಕೊಂಡಿರುವ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.

Previous articleಕುಕ್ಕರ್‌ ಬ್ಲಾಸ್ಟ್‌ ಪ್ರಕರಣ ರಾಜಕೀಯಕ್ಕೆ ಬಳಕೆ: ಸಿದ್ದರಾಮಯ್ಯ
Next articleನನ್ನ ಸ್ಪರ್ಧೆ ನಿಶ್ಚಿತ: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ