ನಾನು ಸಂವಿಧಾನದ ಪರ – ಶಾಸಕ ಬಯ್ಯಾಪುರ

0
9
ಬಯ್ಯಾಪುರ್‌

ಕುಷ್ಟಗಿ: ನಾನು ಯಾವುದೇ ಕಾರಣಕ್ಕೂ ಸಂವಿಧಾನ ವಿರೋಧಿ ವ್ಯಕ್ತಿಯಲ್ಲ. ಸಂವಿಧಾನವನ್ನು ಪ್ರೀತಿ, ಗೌರವದಿಂದ ಕಾಣುವ ವ್ಯಕ್ತಿಯಾಗಿದ್ದೇನೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕರಿಗೆ ಮತ್ತು ಸಂಸದರಿಗೆ ವಿದ್ಯಾರ್ಹತೆ ನಿಗದಿಪಡಿಸಿದಾಗ ಮಾತ್ರ ಕಾನೂನು ರಚನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಕಾನೂನು ರಚನೆ ಮಾಡುವ ಸಂದರ್ಭದಲ್ಲಿ ಕಾನೂನು ಜ್ಞಾನ ಉಳ್ಳವರು ಇದ್ದಾಗ ಮಾತ್ರ ಕಾನೂನಿನ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಂವಿಧಾನ ತಿದ್ದುಪಡಿ ಮಾಡಬೇಕೆನ್ನುವ ಮಾತನ್ನು ಹೇಳಿರುವುದು ಸತ್ಯ. ಆದರೆ, ತುಳಿತಕ್ಕೆ ಒಳಪಟ್ಟಿರುವ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಬೇಕೆಂದು ನಾನು ಎಲ್ಲಿಯೂ ಸಹ ಹೇಳಿಲ್ಲ. ನಾನು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವು ಉಂಟಾಗಿದ್ದರೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ ಎಂದರು.

Previous articleಜನಸಂಕಲ್ಪ ಯಾತ್ರೆಗೆ ಇನ್ನಷ್ಟು ವೇಗ – ಸಿಎಂ ಬೊಮ್ಮಾಯಿ
Next articleನಾವ್ಯಾರೂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ – ಮಹೇಶ್ ಕುಮಟಳ್ಳಿ