ನಮ್ಮದು ನರೇಂದ್ರ ಮೋದಿ ಸಂಸ್ಕೃತಿ

0
13

ಹುಬ್ಬಳ್ಳಿ: ನಮ್ಮದು ನರೇಂದ್ರ ಮೋದಿ ಅವರ ಸಂಸ್ಕೃತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸನದ್ದು ಟಿಪ್ಪು ಸುಲ್ತಾನ್ ಸಂಸ್ಕೃತಿ, ಬಿಜೆಪಿಯದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಕೃತಿ’ ಎನ್ನುವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಎಂ, ‘ಯಾರ್ಯಾರದ್ದು ಯಾವ್ಯಾವ ಸಂಸ್ಕೃತಿ ಎನ್ನುವುದು ನಾಡಿನ ಜನತೆಗೆ ತಿಳಿದಿದೆ. ನನ್ನ ಪ್ರಕಾರ ನಮ್ಮದು ನರೇಂದ್ರ ಮೋದಿ ಸಂಸ್ಕೃತಿ. ಹಿಂದೆಂದೂ ಕಾಣದ ರೀತಿಯಲ್ಲಿ ಭಾರತವನ್ನು‌ ಶಸಕ್ತವಾಗಿ, ಶ್ರೀಮಂತವಾಗಿ ಕಟ್ಟುವ ಕಾಲ ಸ್ವಾತಂತ್ರ್ಯಾನಂತರ ಈಗ ಬಂದಿದೆ. ಇಡೀ ಜಗತ್ತಿನಲ್ಲಿ ಭಾರತವನ್ನು ಸರ್ವಶ್ರೇಷ್ಠ ದೇಶವನ್ನಾಗಿ ಮಾಡುವ ಧ್ಯೇಯ ಇಟ್ಟುಕೊಂಡು ನಾವು ಸಾಗುತ್ತಿದ್ದೇವೆ’ ಎಂದರು.
‘ಶಿವಮೊಗ್ಗ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಬೇಕೆನ್ನುವ ಕುರಿತು ಒಟ್ಟಿಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಇಡಬೇಕೆನ್ನುವ ಬೇಡಿಕೆಯಿತ್ತು. ಈ ಕುರಿತು ತೀರ್ಮಾನ ಕೈಗೊಂಡಿದ್ದಾಗ ಯಡಿಯೂರಪ್ಪನವರು, ತಮ್ಮ ಹೆಸರು ಬೇಡ ಎಂದು ಹೇಳಿದ್ದರು. ಇತ್ತೀಚೆಗೆ ಶಿವಮೊಗ್ಗ ಹೋಗಿದ್ದಾಗ ಸಾರ್ವಜನಿಕರಿಂದ ಮತ್ತೆ ಒತ್ತಡ ಬಂದಿತ್ತು. ಹಿಂದಿನ ಮಾತನ್ನು ಮತ್ತೊಮ್ಮೆ ಅವರು ಪುನರುಚ್ಚರಿಸಿದ್ದಾರೆ. ಯಾರ ಹೆಸರು ಇಡಬೇಕೆನ್ನುವ ಕುರಿತು ಶೀಘ್ರದಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Previous articleಕಾಂಗ್ರೆಸ್ ಕಂಬಿ ಇಲ್ಲದೆ ರೈಲು ಬಿಟ್ಟಿತ್ತು: ಲೋಕಸಭೆಯಲ್ಲಿ ಕನ್ನಡದಲ್ಲೇ ಕುಟಕಿದ ತೇಜಸ್ವಿ
Next articleಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಆರ್ ಅಶೋಕ್ ಮುಕ್ತ