ನಟ ಚೇತನ ನಾಲಾಯಕ್: ಯತ್ನಾಳ

0
15
ಯತ್ನಾಳ

ವಿಜಯಪುರ: `ನಟ ಚೇತನ್ ಅಂಬೇಡ್ಕರ್ ಜಯಂತಿಗೆ ಬಂದು ನಾಟಕ ಮಾಡಿದ್ದ. ಅವನೊಬ್ಬ ನಾಲಾಯಕ್ ಇವರೆಲ್ಲ ಅಯೋಗ್ಯರು ಮುಸ್ಲೀಮರ ಏಜಂಟರು. ಅವರು ದುಡ್ಡುಕೊಟ್ಟು ಇವರನ್ನು ಮಾತನಾಡಲು ಹಚ್ಚುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ದೊಡ್ಡದಾಗಿ ಹಿಂದುತ್ವದ ವಿರುದ್ಧ ಮಾತನಾಡುವ ಕೆಲವು ಅಯೋಗ್ಯರು ದೇಶದಲ್ಲಿ ಇದ್ದಾರೆ. ಅಷ್ಟೇ ಯಾಕೆ ನಮ್ಮ ನಗರದಲ್ಲೂ ಇದ್ದಾರೆ. ಹಿಂದುತ್ವ ಹೇಳುತ್ತಾರೆ. ದೊಡ್ಡದಾಗಿ ನಾಮ ಹಚ್ಚಿಕೊಳ್ಳುತ್ತಾರೆ. ರಾತ್ರಿಯಲ್ಲ ಹಿಂದು ವಿರೋಧಿ ಕೆಲಸ ಮಾಡುತ್ತಾರೆ. ಇಂತವರಿಗೆ ಬಹಳ ಪ್ರಾಮುಖ್ಯತೆ ಕೊಡಬೇಡಿ ಎಂದು ಮಾಧ್ಯಮದವರಿಗೆ ಹೇಳಿದರು.
ಹಿಂದು ವಿರೋಧಿಯಾಗಿ ಮಾತನಾಡಿದವರು ಶಿಕ್ಷೆ ಅನುಭವಿಸಿದ್ದಾರೆ. ಮುಂದೆ ಇವರು ಅನುಭವಿಸುತ್ತಾರೆ. ಹಿಂದೂ ವಿರೋಧಿಯಾಗಿ ಮಾತನಾಡಿದವರ ಚಿತ್ರಗಳು ಬಿದ್ದು ಹೋಗಿವೆ. ನಾವು ಮುಸ್ಲಿಂ, ಹಿಂದೂ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮ ವಿರೋಧಿಗಳು ಅಲ್ಲ. ಆ ಧರ್ಮದ ಹೆಸರು ತೆಗೆದುಕೊಂಡು ಭಯೋತ್ಪಾದನೆ ಮಾಡುವುದು, ಲವ್ ಜಿಹಾದ್ ಮಾಡುವುದು ಧರ್ಮದ ಹೆಸರಿನ ಮೇಲೆ ಶಾಂತಿಯನ್ನು ಕದಡುವಂತವರ ವಿರೋಧಿಗಳು ನಾವು ಎಂದರು.

Previous articleತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಹೆಲಿಕಾಪ್ಟರ್
Next articleಕಮೀಷನರ್ ಕುರ್ಚಿಯಲ್ಲಿ ಮಗಳು: ಭಾವುಕರಾದ ತಾಯಿ