ದೇಶದ ಎರಡನೇ ಅತಿ ದೂರ ಕ್ರಮಿಸುವ ‘ನಮ್ಮ ಮೆಟ್ರೋ’ ಉದ್ಘಾಟನೆ

0
13
ಮೇಟ್ರೋ

ಬೆಂಗಳೂರಿನ ವೈಟ್​​ಫೀಲ್ಡ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದರು. ಕೆ.ಆರ್.ಪುರಂನಿಂದ ವೈಟ್‌ಫೀಲ್ಡ್‌ವರೆಗಿನ ನೂತನ ಮೆಟ್ರೋ ಮಾರ್ಗ 4,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. 13.71 ಕಿಲೋಮೀಟರ್ ಇರುವ ನೂತನ ನೇರಳ ಮಾರ್ಗ 12 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ. ಬೆಂಗಳೂರನ ವೈಟ್‌ಫೀಲ್ಡ್‌ – ಕೆಆರ್‌ಪುರಂ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. 4,500 ಕೋಟಿ ವೆಚ್ಚದ ಮಾರ್ಗ ಇದಾಗಿದೆ.
ದಿಲ್ಲಿ ಮೆಟ್ರೋ ಪ್ರಸ್ತುತ 390 ಕಿ.ಮೀ. ಸಂಚಾರ ಮಾರ್ಗ ಹೊಂದಿದ್ದು, ದೇಶದಲ್ಲಿಯೇ ನಂಬರ್‌ ಒನ್‌ ಸ್ಥಾನದಲ್ಲಿದೆ. ನಮ್ಮ ಮೆಟ್ರೋ ದೇಶದ ಎರಡನೇ ಅತಿ ದೂರ ಕ್ರಮಿಸುವ ಮೆಟ್ರೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ 69.2 ಕಿ.ಮೀ. ಸಂಚಾರ ಮಾಡುತ್ತಿರುವ ಹೈದರಾಬಾದ್‌ ಮೆಟ್ರೋ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಗ್ಗಲಿದೆ.
ವೈಟ್​​ಫೀಲ್ಡ್​​ನಲ್ಲಿ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ, ಅದೇ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.

Previous articleಕನ್ನಡ ಭಾಷೆ ದೇಶದಲ್ಲಿ ಸಮೃದ್ಧ ಭಾಷೆ
Next articleಅನರ್ಹಗೊಳಿಸುವ ಮೂಲಕ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ