ದೇಶದಲ್ಲಿ ಮೋದಿ ಸರ್ಕಾರ ಇರುವುದಿಲ್ಲ

0
12

ಹುಬ್ಬಳ್ಳಿ: ಭಾರತದಲ್ಲಿ ೨೦೨೪ ಕ್ಕೆ ನರೇಂದ್ರ ಮೋದಿ ಅವರ ಸರ್ಕಾರ ಇರುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಅವರು ನಮ್ಮ ಸರಕಾರ ಬಹಳ ದಿನ ಇರುವುದಿಲ್ಲ ಎಂದು ಅವರು ಲೆಕ್ಕಾಚಾರ ಮಾಡುತ್ತಾರೆ. ಆದರೆ, ನಮ್ಮ ಲೆಕ್ಕಾಚಾರದ ಪ್ರಕಾರ ೨೦೨೪ ಕ್ಕೆ ದೇಶದಲ್ಲಿ ಮೋದಿ ಅವರ ಸರಕಾರ ಇರುವುದಿಲ್ಲ. ನೋಡೋಣ ಯಾರ ಲೆಕ್ಕಾಚಾರ ನಿಜ ಆಗುತ್ತದೆ ಎಂದು ಹೇಳಿದರು.
ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಕೆಲವರು ಬರುತ್ತಿದ್ದಾರೆ. ಇದರಿಂದ ನಮಗೇನೂ ಭಯ ಇಲ್ಲ ಅವರು ಸ್ವಯಂ ಆಗಿ ಬರುತ್ತಾರೆ. ಬಿಜೆಪಿ ಬಿಟ್ಟು ಯಾಕೆ ಬರುತ್ತಿದ್ದಾರೆ ಎಂಬುದನ್ನು ಅವರನ್ನು ಕೇಳಬೇಕು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ ಎಂದು ಹೇಳಬಹುದು ಎಂದರು.

Previous articleಮಾಜಿ ಸಿಎಂ ಆರೋಗ್ಯ ವಿಚಾರಿಸಿದ ಸಿಎಂ
Next articleಭೀಮಾ ತೀರದಲ್ಲಿ ಮತ್ತೊಂದು ಬರ್ಬರ ಹತ್ಯೆ