ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ವ್ಯವಸ್ಥಾಪನ ಮಂಡಳಿ ನೇತೃತ್ವದ ಉರುಸ್ ಆಚರಣೆಗೆ ವಿರೋಧ ವ್ಯಕ್ತವಾಗಿದೆ.
ನೂರಾರು ಮುಸ್ಲಿಂ ಮುಖಂಡರಿಂದ ವಿವಾದಿತ ದರ್ಗಾ ಮುಂಭಾಗ ಪ್ರತಿಭಟನೆ ನಡೆಸಲಾಗಿದ್ದು, ಒಂದೆಡೆ, ದತ್ತಪೀಠ ವ್ಯವಸ್ಥಾಪನಾ ಮಂಡಳಿ ನೇತೃತ್ವದಲ್ಲಿ ಉರುಸ್ ಗೆ ಸಿದ್ಧತೆ ನಡೆದಿದ್ದು. ಮತ್ತೊಂದೆಡೆ ಕಪ್ಪು ಪಟ್ಟಿ ಧರಿಸಿ ನೂರಾರು ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ದರ್ಗಾದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.