Home Advertisement
Home ನಮ್ಮ ಜಿಲ್ಲೆ ತುಮಕೂರು ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ

ತುಮಕೂರು ಪಿಎಸ್‌ಐ ಲೋಕಾಯುಕ್ತರ ಬಲೆಗೆ

0
6

ತುಮಕೂರು: ಠಾಣೆಯ ವಶದಲ್ಲಿದ್ದ ವಾಹನವನ್ನು ಬಿಡುಗಡೆ ಮಾಡಲು ಲಂಚ ಪಡೆದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗಿನ ಜಾವ ಬಂಧಿಸಿದ್ದಾರೆ.

ವಾಹನ ಬಿಡುಗಡೆಗೆ ಒಟ್ಟು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಚೇತನ್, ಮೊದಲ ಹಂತವಾಗಿ ₹40 ಸಾವಿರ ಹಣವನ್ನು ಪಡೆಯಲು ಸೂಚಿಸಿದ್ದರೆಂದು ಆರೋಪಿಸಲಾಗಿದೆ. ಈ ಹಣವನ್ನು ನೇರವಾಗಿ ತಮ್ಮ ಕೈಗೆ ನೀಡುವ ಬದಲು, ಕ್ಯಾತ್ಸಂದ್ರ ಸಮೀಪದ ಹೋಟೆಲ್‌ನ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹನ ಮಾಲೀಕರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಲಂಚಕೋರ ಇನ್‌ಸ್ಪೆಕ್ಟರ್‌ನ ಹೈಡ್ರಾಮಾ ವೈರಲ್!

ಪಿಎಸ್‌ಐ ಚೇತನ್ ಅವರ ಲಂಚದ ಬೇಡಿಕೆಯಿಂದ ಬೇಸತ್ತ ವಾಹನ ಮಾಲೀಕರು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಪರಿಶೀಲನೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಯೋಜಿತ ಕಾರ್ಯಾಚರಣೆ ರೂಪಿಸಿದ್ದರು.

ಶುಕ್ರವಾರ ರಾತ್ರಿ ಕ್ಯಾತ್ಸಂದ್ರದ ಹೋಟೆಲ್‌ನಲ್ಲಿ ಹೋಟೆಲ್ ಸಿಬ್ಬಂದಿ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನಡೆಸಿದ ವಿಚಾರಣೆಯಲ್ಲಿ, ಹಣ ಪಿಎಸ್‌ಐ ಚೇತನ್ ಸೂಚನೆಯ ಮೇರೆಗೆ ಪಡೆಯಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಬಿಗ್ ಶಾಕ್: ₹177.3 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ

ಈ ಮಾಹಿತಿಯ ಆಧಾರದ ಮೇಲೆ ಶನಿವಾರ ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಮುಂದಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ಯಲಾಗಿದೆ.

Previous articleರಾಜ್ಯ ಸಾರಿಗೆ ಬಸ್‌, ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಸಂಪೂರ್ಣ ನಿಷೇಧ
Next articleಕೇಂದ್ರ ಬಜೆಟ್‌: `ಡಿಜಿಟಲ್ ಕರ್ನಾಟಕ’ಕ್ಕೆ ದೊರೆಯುವುದೇ ಅಭಯ?