Home Advertisement
Home ನಮ್ಮ ಜಿಲ್ಲೆ ಡಿ. 3ರಂದು ಬೆಳಗಾವಿಗೆ ಮಹಾಸಚಿವರು: ಅಧಿಕೃತ ವೇಳಾಪಟ್ಟಿ ಪ್ರಕಟ

ಡಿ. 3ರಂದು ಬೆಳಗಾವಿಗೆ ಮಹಾಸಚಿವರು: ಅಧಿಕೃತ ವೇಳಾಪಟ್ಟಿ ಪ್ರಕಟ

0
101
ಮಹಾ

ಬೆಳಗಾವಿ: ತೀವ್ರ ವಿರೋಧದ ನಡುವೆಯೇ ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಸಚಿವರು ಡಿ. 3ರಂದು ಬೆಳಗಾವಿಗೆ ಆಗಮಿಸುವ ಬಗ್ಗೆ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಹಾರಾಷ್ಟ್ರ ಸರ್ಕಾರದಿಂದ ಗಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ಡಿಸೆಂಬರ್ 3ರಂದು ಬೆಳಿಗ್ಗೆ 11ಗಂಟೆಗೆ ಕೊಲ್ಹಾಪುರದಿಂದ ನೇರವಾಗಿ ಬೆಳಗಾವಿಯ ಶಾಹುಪುರದ ಶಿವಾಜಿ ಉದ್ಯಾನಕ್ಕೆ ಆಗಮಿಸಿ ಛತ್ರಪತಿ ಶಿವಾಜಿ ಮಹಾರಾಜ್‌ರ ಪುತ್ಥಳಿಗೆ ಗೌರವ ಸಮರ್ಪಿಸಲಿದ್ದಾರೆ. ಅಲ್ಲಿಂದ ಹಿಂಡಲಗಾದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ಕೊಡಲಿದ್ದಾರೆ. ಇದಾದ ನಂತರ ರಾಮಲಿಂಗಖಿಂಡ ಗಲ್ಲಿಯ ರಂಗುಬಾಯಿ ಬಿಲ್ಡಿಂಗ್‌ನಲ್ಲಿ ಎಂಇಎಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ನಂತರ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾತ್ರಿಯೇ ಕೊಲ್ಹಾಪುರಕ್ಕೆ ಮರಳಿ ಪ್ರಯಾಣ ಬೆಳೆಸಲಿದ್ದಾರೆ.

Previous articleಮುಸ್ಲಿಂ ಕಾಲೇಜ್ ಆರಂಭ ವಿಚಾರ: ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ
Next articleಮುಸ್ಲಿಮರ ಗೆಲುವಿಗೆ ನಾನೇ ಮುಂದಾಳತ್ವ ವಹಿಸುವೆ