ಡಿ. ಕೆ. ಶಿವಕುಮಾರ್ ಹೆಲಿಕಾಪ್ಟರ್ ತಪಾಸಣೆ

0
9

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪ್ರಯಾಣಿಸಿದ್ದ ಹೆಲಿಕಾಪ್ಟರನ್ನು ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಎರಡು ಪ್ರತ್ಯೇಕ ಹೆಲಿಕಾಫ್ಟರ್‌ನಲ್ಲಿ ಡಿ. ಕೆ. ಶಿವಕುಮಾರ್ ಮತ್ತವರ ಕುಟುಂಬ ಆಗಮಿಸಿದ್ದು ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ, ನಾಯಕ ಮಿಥುನ್ ರೈ ಸ್ವಾಗತಿಸಿದರು.
ಇದೇ ವೇಳೆ, ಡಿ. ಕೆ. ಶಿವಕುಮಾರ್ ಪತ್ನಿ, ಮಗ, ಮಗಳು, ಅಳಿಯ ಪ್ರಯಾಣಿಸಿದ್ದ ಹೆಲಿಕಾಪ್ಟರ್ ತಪಾಸಣೆ ಮಾಡಲು ಬಂದ ಚುನಾವಣಾಧಿಕಾರಿಗಳ ಜೊತೆಗೆ ಹೆಲಿಕಾಪ್ಟರ್ ಪೈಲೆಟ್ ರಾಮದಾಸ್ ವಾಗ್ವಾದ ಮಾಡಿದ್ದಾರೆ. ಇದು ಖಾಸಗಿ ಹೆಲಿಕಾಪ್ಟರ್, ತಪಾಸಣೆ ಮಾಡಲು ಅವಕಾಶ ಇಲ್ಲ ತಿಳಿಸಿದ್ದಾರೆ. ಈ ಸಂದರ್ಭ ಪೈಲಟ್ ರಾಮದಾಸ್ ಮತ್ತು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ.
ಬಳಿಕ ಡಿ. ಕೆ. ಶಿವಕುಮಾರ್ ಮತ್ತು ಕುಟುಂಬ ಮಂಜುನಾಥ ಸ್ವಾಮಿ ದರ್ಶನ ಮಾಡಿದರು. ಬಳಿಕ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಲಿಕಾಪ್ಟರ್‌ನ್ನು ಕೂಡಾ ತಪಸಣೆ ನಡೆಸಲಾಗಿತ್ತು.


ಸುಭಿಕ್ಷೆಗಾಗಿ ಪ್ರಾರ್ಥನೆ..
ಮಂಜುನಾಥ ಸ್ವಾಮಿಯಲ್ಲಿ ರಾಜ್ಯದ ಸುಭಿಕ್ಷೆಗಾಗಿ ಪ್ರಾರ್ಥಿಸಿದ್ದೇನೆ. ಮಂಜುನಾಥ ನನಗೆ ಎಲ್ಲ ರೀತಿಯಿಂದಲು ಒಳ್ಳೆದು ಮಾಡಿದ್ದಾನೆ. ಮಾತು ಬಿಡದ ಮಂಜುನಾಥ ಎನ್ನುವ ಹೆಸರಿದೆ, ಆತ ಯಾವತ್ತೂ ನಮ್ಮ ಕೈಬಿಡಲ್ಲ. ದೇವರಲ್ಲಿ ರಾಜ್ಯದ ಜನರಿಗೆ ಒಳ್ಳೆದು ಮಾಡಲು ಪ್ರಾರ್ಥಿಸಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Previous articleಸಮಾನ ಅಂಕ ಪಡೆದ ಅವಳಿ ಸಹೋದರಿಯರು
Next articleಫಲಿತಾಂಶದಲ್ಲಿ ‘ಲಿಂಗಾಯತ ಡ್ಯಾಂ’ ಶಕ್ತಿ ಪ್ರದರ್ಶನ