ಶಿರಸಿ: ತಾಲೂಕಿನ ಡಾ. ವೀಣಾಶ್ರೀ ಭಟ್ ಅವರು ೨೦೨೨-೨೩ನೇ ಸಾಲಿನ ವೈದ್ಯಕೀಯ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ (ಎನ್‌ಇಇಟಿ-ಎಸ್‌ಎಸ್ ೨೦೨೨) ರಾಷ್ಟ್ರಮಟ್ಟಕ್ಕೆ ೧೧ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಡಾ. ವೀಣಾಶ್ರೀ ಮಕ್ಕಳ ತಜ್ಞರಾಗಿದ್ದು, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಾಲೂಕಿನ ಹೆಗ್ಗರ್ಸಿಮನೆಯ ವೇ.ಮೂ.ಸತ್ಯನಾರಾಯಣ ಭಟ್ ಮತ್ತು ದಾಕ್ಷಾಯಿಣಿ ಅವರ ಸುಪುತ್ರಿ ಹಾಗೂ ಸಾಲೇಕೊಪ್ಪದ ಪಟೇಲರ ಮನೆಯ ಡಾ. ಶ್ರೀಶ ಮಂಜುನಾಥ ಹೆಗಡೆ(ಕಿಡ್ನಿ ತಜ್ಞರು) ಇವರ ಪತ್ನಿ.






















