ಜಗತ್ತಿಗೇ ಫ್ಯಾಕ್ಟರಿಯಾಗಲಿದೆ ಭಾರತ

0
17

ಧಾರವಾಡ: ಜಗತ್ತಿನಲ್ಲಿ ವಿವಿಧ ಉತ್ಪನ್ನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಚೀನಾವನ್ನು ಮುಂದಿನ ೧೦ ವರ್ಷಗಳಲ್ಲಿ ಭಾರತ ಹಿಂದಿಕ್ಕಿ ಜಗತ್ತಿನ ಫ್ಯಾಕ್ಟರಿ ಆಗುವುದರಲ್ಲಿ ಸಂದೇಹವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಜೆಎಸ್‌ಎಸ್ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿ, ಹಿಂದೆ ಭಾರತವನ್ನು ಹೆದರಿಸುವ ಕೆಲಸ ಆಗುತ್ತಿತ್ತು. ಆದರೆ, ಇಂದು ನಮ್ಮ ದೇಶವನ್ನು ಯಾರಿಂದಲೂ ಹೆದರಿಸಲು ಸಾಧ್ಯವಿಲ್ಲ. ಇಷ್ಟು ವರ್ಷಗಳವರೆಗೆ ರಕ್ಷಣಾ ಇಲಾಖೆ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮುಂದಿನ ದಿನಗಳಲ್ಲಿ ೧೦ ಲಕ್ಷ ಕೋಟಿ ರಫ್ತು ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ವೀರೇಂದ್ರ ಹೆಗ್ಗಡೆ ಅವರು ದೂರದೃಷ್ಠಿತ್ವ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎನ್ನುವ ಆಶಯವನ್ನು ಹೊಂದಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಧಾರವಾಡಕ್ಕೆ ಮೊಟ್ಟ ಮೊದಲ ದಂತ ಹಾಗೂ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ ಹಿರಿಮೆ ಅವರದ್ದಾಗಿದೆ. ಅಷ್ಟಕ್ಕೆ ನಿಲ್ಲದೇ ಅದನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಕೆ ಮಾಡಿದರು ಎಂದರು.

Previous articleಇನ್‌ಸ್ಟಾಗ್ರಾಂನಲ್ಲಿ ಶುರುವಾದ ಲವ್.. ೧೫ ದಿನ ಲವ್ವಿ ಡವ್ವಿ…
Next articleಬಾಲಕಿ ವಿದ್ಯಾಭ್ಯಾಸಕ್ಕೆ ನೆರವಾದ ಕೆ.ಎಲ್. ರಾಹುಲ್