ಚಿತ್ರದುರ್ಗ: ಚಿತ್ರದುರ್ಗ ನಗರದ ಆಶ್ರಯ ಕಾಲೋನಿಯಯಲ್ಲಿ ನಾಲ್ವರು ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿರುವ ಶಂಕೆ ಇದ್ದು ಸ್ಥಳಕ್ಕೆ ಚಿತ್ರದುರ್ಗ ಡಿಹೆಚ್ಓ ಡಾ.ರಂಗನಾಥ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆಶ್ರಯ ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಪ್ರಾರಂಭವಾಗಿದ್ದು, ಕಳೆದ ಕೆಲ ದಿನಗಳಿಂದ ಸೂಳೆ ಕೆರೆ ನೀರು ಸರಬರಾಜು ಮಾಡಲಾಗುತ್ತಿದ್ದು, ಸೂಳೆಕೆರೆ ನೀರು ಸೇವನೆ ಬಳಿಕ ಅಸ್ವಸ್ಥ ಆಗಿದ್ದಾರೆ ಎಂದು ಜನರು ಶಂಕೆ ವ್ಯಕ್ತಪಡಿಸಿಸದ್ದಾರೆ.