ಚಿಕ್ಕಬಳ್ಳಾಪುರ ಉತ್ಸವ ಥೀಮ್ ಸಾಂಗ್ ಬಿಡುಗಡೆ

0
10
ಚಿಕ್ಕಬಳ್ಳಾಪುರ

ಜನವರಿ 7ರಿಂದ ಆರಂಭಗೊಳ್ಳಲಿರುವ ಚಿಕ್ಕಬಳ್ಳಾಪುರ ಉತ್ಸವ-2023ರ ಥೀಮ್ ಸಾಂಗ್‌ನ್ನು ಸಚಿವ ಸುಧಾಕರ ಅವರು ಇಂದು ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಸಚಿವರು ಬಿಡುಗಡೆಗೊಳಿಸಿದರು. ಹಾಡಿಗೆ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕರು, ಸಾಹಿತಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಉತ್ಸವದ ಕಾರ್ಯಕ್ರಮಗಳ, ಸ್ಪರ್ಧೆಗಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಹೊಂದಿದ ವೆಬ್‌ಸೈಟ್‌ನ್ನು ಬಿಡುಗಡೆಗೊಳಿಸಲಾಯಿತು.

Previous articleನಿಸರ್ಗ ದೇವತೆ ಮಡಿಲಿಗೆ ಸಿದ್ದೇಶ್ವರ ಶ್ರೀ
Next articleಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ ನಾಲ್ವರ ಬಂಧನ