ಶಿಗ್ಗಾವಿ : ದರೋಡೆಕೋರರು ಗ್ಯಾಸ್ ಕಟರ್ ಬಳಿಸಿ ಬಂಗಾರದ ಅಂಗಡಿ ದೋಚಿದ ಘಟನೆ ಶಿಗ್ಗಾವಿ ಪಟ್ಟಣದ ಹಳೆ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಸುಮಾರು 15 ಕೆಜಿ ಬೆಳ್ಳಿ ಆಭರಣ, 80 ಗ್ರಾಂ ಚಿನ್ನದ ಆಭರಣಗಳನ್ನ ಕಳ್ಳರು ದೋಚಿದ್ದಾರೆ, ಸುಮಾರು 15 ಲಕ್ಷ ರುಪಾಯಿ ಮೌಲ್ಯದ ಆಭರಣ ಕಳ್ಳತನ ಎಂದು ತಿಳಿದು ಬಂದಿದ್ದು. ಪಟ್ಟಣದ ಮೋಹನ್ ಬದ್ದಿ ಎಂಬುವರಿಗೆ ಸೇರಿದ ಬಂಗಾರದ ಅಂಗಡಿ ಎನ್ನಲಾಗಿದೆ. ಇಂದು ಸುಮಾರು ಬೆಳಗ್ಗೆ 3.30 ವೇಳೆ ಈ ಘಟನೆ ನಡೆದಿದೆ, ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ, ಸಿಪಿಐ ಸತ್ಯಪ್ಪ ಮಾಳಗೋಡ.ಪಿಎಸ್ಐ ಸಂಪತ್ತು ಆನಿಕಿವಿ ಭೇಟಿ ಪರಿಶೀಲನೆ ಕೈಗೊಂಡಿದ್ದಾರೆ.