ಗುಂಡಿಯಲ್ಲಿ ಕಾಲು ಜಾರಿ ಬಿದ್ದು: ಬಾಲಕರ ಸಾವು

0
16
ಬದಾಮಿ

ಕುಷ್ಟಗಿ: ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟಿದ್ದಾರೆ. ಎತ್ತು ಮೈತೊಳೆಯಲು ಹೋಗಿದ್ದ ಬಾಲಕರು ಕಾಲುಜಾರಿ ಬಿದ್ದು ಮತಪಟ್ಟ ನತದೃಷ್ಟ ಬಾಲಕರಾಗಿದ್ದಾರೆ.
ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ(9) ಹಾಗೂ ವಿಜಯ ಮಾದರ(9) ನೀರು ಪಾಲಾಗಿರುವ ಬಾಲಕರು ಎಂದು ಗುರುತಿಸಲಾಗಿದ್ದು, ಗ್ರಾಮದ ವಕ್ಕನದುರ್ಗಾ ರಸ್ತೆಗೆ ಹೊಂದಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಬೃಹತ್ ಆಕಾರದ ಗುಂಡಿಯಲ್ಲಿನ ನೀರಿನಲ್ಲಿ ಕಾಲು ಜಾರಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಅಶೋಕ ಬೇವೂರು ಖಚಿತ ಮಾಹಿತಿ ನೀಡಿದ್ದಾರೆ .
ಗುಂಡಿಗೆ ಜಾರಿ ಬಿದ್ದಿದ್ದ ನಾಲ್ಕು ಜನ ಬಾಲಕರ ಪೈಕಿ ಇಬ್ಬರು ಬದುಕುಳಿದು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Previous articleಫಿಲಿಪ್ಸ್ 4,000 ಉದ್ಯೋಗ ಕಡಿತ : ಜಾಕೋಬ್ಸ್
Next articleರಾಜ್ಯಮಟ್ಟದ ಉತ್ಸವಕ್ಕೆ ಅದ್ಧೂರಿ ಚಾಲನೆ; ಸಾಂಸ್ಕೃತಿಕ ಕಲಾವೈಭವ