ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಪಡೆ

0
18

ಹುಬ್ಬಳ್ಳಿ: ಗಣೇಶೋತ್ಸವಕ್ಕೆ ಹೆಸರಾದ ವಾಣಿಜ್ಯನಗರಿ‌ ಹುಬ್ಬಳ್ಳಿಯಲ್ಲಿ 11ನೇ ದಿನದ ಗಣೇಶಮೂರ್ತಿ ವಿಸರ್ಜನೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಗುರುವಾರ ಮಧ್ಯಾಹ್ನದಿಂದಲೇ ಆರಂಭವಾದ ಮೆರವಣಿಗೆಯಲ್ಲಿ ಯುವಕರು, ಯುವತಿಯರು‌ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ದಾಜಿಬಾನ್‌ ಪೇಟೆಯಲ್ಲಿ ಪ್ರತಿಷ್ಠಾಪಿಸಿದ್ದ 22 ಅಡಿ ಎತ್ತರದ ‘ಹುಬ್ಬಳ್ಳಿ ಕಾ ರಾಜಾ’ ಗಣೇಶ ಮೂರ್ತಿ ಹಾಗೂ ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ ‘ಹುಬ್ಬಳ್ಳಿ ಕಾ ಮಹಾರಾಜಾ’ ಗಣಪತಿಯ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಸೇರಿ‌ ನೃತ್ಯ ಮಾಡಿದರು.
ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಒಂದೆಡೆ ಡಿಜೆ ಹಾಡು ಮೊಳಗಿದರೆ, ಮತ್ತೊಂದೆಡೆ ‘ಗಣಪತಿ ಬಪ್ಪಾ ಮೊರೆಯಾ, ಮಂಗಳಮೂರ್ತಿ ಮೊರೆಯಾ’, ‘ಗಜಾನನ ಮಹಾರಾಜ ಕೀ ಜೈ’ ಘೋಷಗಳು ಪ್ರತಿಧ್ವನಿಸುತ್ತಿದ್ದವು. ಡಿಜೆ, ಡಾಲ್ಬಿ ಅಬ್ಬರದ ಸದ್ದಿಗೆ ಯುವಕರು ಮನದಣಿಯೇ ಕುಣಿದು ಸಂಭ್ರಮಿಸಿದರು.

Previous articleಎಂದಿನಂತೆ ನಾಳೆಯೂ ಶಾಲಾ-ಕಾಲೇಜು, ಸಾರಿಗೆ, ಇತರೆ ಸೇವೆ ಯಥಾಸ್ಥಿತಿ
Next articleಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು