ಗಣೇಶ ಚತುರ್ಥಿ: ರಜೆ ಗೊಂದಲ

0
9

ಮಂಗಳೂರು: ಗಣೇಶ ಚತುರ್ಥಿ ರಜೆ ವಿಷಯದಲ್ಲಿ ಗೊಂದಲ ನಿರ್ಮಾಣವಾಗಿದೆ. ಕರಾವಳಿ ಸೇರಿದಂತೆ ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಸೆ. ೧೯ರಂದು ಆಚರಿಸಲಾಗುತ್ತಿದೆ. ಆದರೆ ಸರಕಾರದ ಕ್ಯಾಲೆಂಡರ್‌ನಲ್ಲಿ ಸೆ. ೧೮ಕ್ಕೆ ರಜೆ ಘೋಷಿಸಲಾಗಿದೆ.
ರಾಜ್ಯ ಸರಕಾರ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.೧೮ರಂದು ವರಸಿದ್ಧಿವಿನಾಯಕ ವೃತ ರಜೆ ಎಂದು ತಿಳಿಸಿದ್ದು, ಕರಾವಳಿ ಭಾಗ ಸೇರಿದಂತೆ ಎಲ್ಲೆಡೆ ಗಣೇಶ ಹಬ್ಬ ಸೆ.೧೯ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ.
ಪಂಚಾಂಗ ಪ್ರಕಾರ ಸೆ.೧೮ರಂದು ಗೌರಿ ತದಿಗೆ. ೧೯ರಂದು ಗಣೇಶ ಚತುರ್ಥಿ. ೧೯ರಂದು ರಜೆ ಇಲ್ಲದ ಕಾರಣ ಕರ್ತವ್ಯದ ದಿನದೊಂದಿಗೆ ಗಣೇಶೋತ್ಸವ ಆಚರಿಸುವ ಸ್ಥಿತಿ ಬಂದಿದೆ. ಸೆ.೧೮ಕ್ಕೆ ರಜೆ ಬೇಡ, ೧೯ಕ್ಕೆ ನೀಡಿ ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳನ್ನು ಸಂಪರ್ಕಿಸುತ್ತಿರುವ ಪೋಷಕರು ಸೆ. ೧೯ಕ್ಕೆ ರಜೆ ನೀಡುವಂತ ಕೋರುತ್ತಿದ್ದಾರೆ. ರಜೆ ಬದಲಾವಣೆ ಕುರಿತಂತೆ ಸರಕಾರವೇ ನಿರ್ಧರಿಸಬೇಕಿದೆ.

Previous articleಈಜುಕೊಳದಲ್ಲಿ ಬ್ಯಾಂಕ್ ಅಧಿಕಾರಿಯ ಮೃತದೇಹ
Next articleಹರಿಪ್ರಸಾದ್ ಹೇಳಿಕೆಯಿಂದ ಅವರಿಗೇ ಹಾನಿ