Home Advertisement
Home ತಾಜಾ ಸುದ್ದಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಕಾಂಗ್ರೆಸ್‌ನವರಿಗೆ ದೇವೇಗೌಡರೇ ಹೇಳಿದ್ರು

ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ಕಾಂಗ್ರೆಸ್‌ನವರಿಗೆ ದೇವೇಗೌಡರೇ ಹೇಳಿದ್ರು

0
83
ಕುಮಾರಸ್ವಾಮಿ

ಹುಬ್ಬಳ್ಳಿ : ಕಾಂಗ್ರೆಸ್ ನವರಿಗೆ ಈಗ ಚುನಾವಣೆ ಬಂದಾಗ ದಲಿತರು ನೆನಪಾಗಿದ್ದಾರೆ. ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಹಿಂದೆ ದೇವೇಗೌಡರೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ. ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದಾಗ ಯಾಕೆ ಮಾಡಲಿಲ್ಲ? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಪೂರ್ವ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿ ಗುಲಾಂ ನಬಿ ಆಜಾದ್, ಗೆಹ್ಲೊಟ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ದೇವೇಗೌಡರೊಂದಿಗೆ ಮಾತುಕತೆ ನಡೆಸಿ ಜೆಡಿಎಸ್ ಬೆಂಬಲ ಕೊರಲು ಬಂದಿದ್ದರು. ಆಗ ದೇವೇಗೌಡರು ನನ್ನ ಮಗನಿಗೆ ಆರೋಗ್ಯ ಸರಿ ಇಲ್ಲ. ನೀವು ಖರ್ಗೆ ಅವರನ್ನು ಸಿಎಂ ಮಾಡಿ. ಬೇಷರತ್ತಾಗಿ ನಾವು ಬೆಂಬಲ ಕೊಡುತ್ತೇವೆ ಎಂದಿದ್ದರು. ಅದಕ್ಕೆ ಯಾರೂ ಒಪ್ಪಿರಲಿಲ್ಲ. ಈಗ ದಲಿತ ಸಿಎಂ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಇದು ಅಧಿಕಾರ ಲಾಲಸೆ ಮತ್ತು ದಲಿತರ ಬಗ್ಗೆ ಕಾಂಗ್ರೆಸ್ ನವರ ತೋರಿಕೆ ಕಾಳಜಿಯನ್ನು ತೋರಿಸುತ್ತದೆ ಎಂದರು ಟೀಕಿಸಿದರು.
ಹೋರಾಟಗಾರರ ಬಂಧನ ಖಂಡನೀಯ
ಆಮುಲ್ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ಸವರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಆಮುಲ್ – ನಂದಿನಿ ಗೊಂದಲ ಸೃಷ್ಟಿ ಮಾಡಿದ್ದೆ ಬಿಜೆಪಿ ಸರ್ಕಾರದವರು. ರಾಜ್ಯದ ಹೈನುಗಾರರ, ರೈತರ ಹಿತರಕ್ಷಣೆ ಬಿಜೆಪಿ ಸರ್ಕಾರಕ್ಕೆ ಬೇಕಿಲ್ಲ ಎಂದು ಟೀಕಿಸಿದರು.

Previous articleಹಾಸನ ಕ್ಷೇತ್ರ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ: ಕುಮಾರಸ್ವಾಮಿ
Next articleಸಚಿನ್ ಪೈಲಟ್ ಉಪವಾಸ ಸತ್ಯಾಗ್ರಹ