ಕೋತಿಗಳಿಗೂ ಉಂಟೆ ಉಚಿತ ಬಸ್ ಪ್ರಯಾಣ…!

0
12

ಹಾವೇರಿ: ಸಾರಿಗೆ ಸಂಸ್ಥೆ ಬಸ್ಸಿನ ಸೀಟಿನಲ್ಲಿ ಕೂತು ಪ್ರಯಾಣಿಕರೊಂದಿಗೆ ಕೋತಿಯೊಂದು ಪ್ರಯಾಣಿಸಿದ ಘಟನೆ ಇಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾವೇರಿಯಿಂದ ಹಿರೇಕೆರೂರಿಗೆ ಗುರುವಾರ ಬೆಳಗ್ಗೆ ಹೊರಟಿದ್ದ ಬಸ್ಸಿಗೆ ಕೋತಿಯೊಂದು ಹೊಕ್ಕಿ ಪ್ರಯಾಣಿಕರು ಕೂರುವ ಸೀಟನ್ನು ಆಕ್ರಮಿಸಿಕೊಂಡು ಕೂತಿದೆ. ಬಸ್‌ನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೂ ಕೋತಿ ಯಾವುದಕ್ಕೂ ಅಂಜದೇ ಸುಮಾರು ೩೦ ಕಿಲೋ ಮೀಟರ್‌ವರೆಗೂ ಪ್ರಯಾಣಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಇಡೀ ಸೀಟನ್ನು ಕೋತಿಗೆ ಬಿಟ್ಟುಕೊಟ್ಟರು.
ಮನುಷ್ಯರಂತೆಯೇ ಸೀಟಿನಲ್ಲಿ ಆರಾಮವಾಗಿ ಕೂತು, ಆಗಾಗ ಕಿಟಕಿಯಲ್ಲಿ ಇಣುಕಿ ನೋಡುತ್ತಿದ್ದ ಕೋತಿಯನ್ನು ನೋಡಿ ಪ್ರಯಾಣಿಕರು ಮೋಜು ಅನುಭವಿಸಿದರು. ಅಲ್ಲಿದ್ದ ಕೆಲವರು ಕೋತಿಗೆ ಬಾಳೆಹಣ್ಣು, ಬಿಸ್ಕತ್ ನೀಡಿದರೂ ಅದು ಯಾವುದನ್ನೂ ಸ್ವೀಕರಿಸದೇ ಗಾಂಭೀರ್ಯದಿಂದ ಕೂತು ಪ್ರಯಾಣಿಸಿತು. ಬಸ್ಸಿನಲ್ಲಿ ಕೋತಿ ಪ್ರಯಾಣಿಸುತ್ತಿದ್ದ ದೃಶ್ಯವನ್ನು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Previous articleಬಿಜೆಪಿ ಆರೋಪ ಆಧಾರರಹಿತ
Next articleರಾಷ್ಟ್ರಧ್ವಜಕ್ಕೆ ಅವಮಾನ: ದೂರು