ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಿಸುತ್ತಿರುವ ಸಿದ್ರಾಮಯ್ಯ

0
14
ರಾಮಲು

ಇಳಕಲ್: ಮಾಜಿ ಮುಖ್ಯ ಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ ಕೂಸು ಹುಟ್ಟುವ ಮೊದಲು ಕುಲಾಯಿ ಹೊಲಿಸುವ ಆತುರದಲ್ಲಿ ಇದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಕುಟುಕಿದ̧ರು, ಮಂಗಳವಾರದಂದು ಶಾಸಕ ದೊಡ್ಡನಗೌಡ ಪಾಟೀಲರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸಿದ್ರಾಮಯ್ಯ ಅವರಿಗೆ ನಿಲ್ಲಲು ಒಂದು ಕ್ಷೇತ್ರ ಸಿಗದ ಸಮಯದಲ್ಲಿ, ನನ್ನನ್ನು ಚುನಾವಣೆಯಲ್ಲಿ ಆರಿಸಿ ತಂದ ನಂತರ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಆಳುತ್ತೇನೆ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಮೊದಲು ನಿಲ್ಲಲು ಅವರಿಗೆ ಕ್ಷೇತ್ರ ಸಿಗಲಿ‌ ನಂತರ ಆಯ್ಕೆಯಾಗಲಿ‌ ಎಂದ ಅವರು ಅವರು ಯಾವದೇಕ್ಷೇತ್ರದಲ್ಲಿ ನಿಂತರೂ ನಾನು ಅಲ್ಲಿ ಅವರನ್ನು ಎದುರಿಸಲು ಸನ್ನದ್ದನಾಗಿದ್ದೇನೆ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ನಗರಸಭೆ ಅಧ್ಯಕ್ಷ ಲಕ್ಷ್ಮಣ ಗುರಂ ಉಪಸ್ಥಿತರಿದ್ದರು.

Previous articleಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ನಿಂತು ಗೆದ್ದು ಬರಲಿ
Next articleಕೋಲಿ, ಕಬ್ಬಲಿಗ ಸಮಾಜದ ಗೌರವಧ್ಯಕ್ಷ ಮುತ್ಯಾಲ್ ಕೊಲೆ