ಕುಡುಕನಿಗೆ ಸಿಕ್ಕಿದ ದುಡ್ಡು..

0
7
ಡ್ರಿಂಕ್ಸ್

ಮಂಗಳೂರು: ‘ಕೈಗೆ ಬಂದ ತುತ್ತು’ ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತಿನಂತಿದೆ ಈ ಸುದ್ದಿ.
ಮದ್ಯವ್ಯಸನಿಯಾಗಿರುವ ಶಿವರಾಜ್ ಎಂಬವರಿಗೆ ನ. 27 ರಂದು ನಗರದ ಪಂಪ್‌ವೆಲ್ ಬಾರ್ ಬಳಿ ಕಂತೆ ಕಂತೆ ಹಣ ಇರುವ ಬಾಕ್ಸ್ ಸಿಕ್ಕಿದೆ. ಬಾಕ್ಸ್‌ನಲ್ಲಿ 500, 2000 ರೂ. ಮುಖಬೆಲೆಯ ಗರಿ ಗರಿ ನೋಟುಗಳಿತ್ತು.
ಹಣ ಸಿಕ್ಕಿದ್ದೇ ತಡ ಮದ್ಯ ವ್ಯಸನಿ ಶಿವರಾಜ್ ಹಣದ ಬಾಕ್ಸ್‌ನಲ್ಲಿದ್ದ 1 ಸಾವಿರ ರೂ. ನೀಡಿ ಮದ್ಯ ಸೇವಿಸಿದ್ದಾರೆ. ನಂತರ ತನ್ನ ಜೊತೆಗಿದ್ದವರಿಗೂ ನೋಟಿನ ಕಂತೆ ನೀಡಿದ್ದಾರೆ. ಈ ವಿಷಯ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹಣದ ಬಾಕ್ಸ್ ಸಹಿತ ಶಿವರಾಜ್‌ನನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ಬಿಟ್ಟು ಕಳಿಸಿದ್ದಾರೆ. ಶಿವರಾಜ್ ಬಾಕ್ಸ್‌ನಲ್ಲಿ 5 ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಕ್ಸ್‌ನಲ್ಲಿ 49 ಸಾವಿರ ರೂ. ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದು ವಾರ ಕಳೆದರೂ ಹಣದ ವಾರಸುದಾರರು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ.

Previous articleಅಪರೂಪದ ಸಾರಿಬಾಳ ಹಾವು ಪತ್ತೆ
Next articleಸೆಲ್ಫಿ ತಂದ ಆಪತ್ತು