ದೆಹಲಿಯ ಕೀರ್ತಿನಗರದಲ್ಲಿರುವ ಪೀಠೋಪಕರಣ ಮಾರುಕಟ್ಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಭೇಟಿ ನೀಡಿದರು. ಬಳಿಕ ಅಲ್ಲಿನ ಕಾರ್ಯನಿರತ ಕಾರ್ಪೆಂಟರ್ ಜತೆಗೆ ತಾವು ಸ್ವತಃ ಕೆಲಸಕ್ಕೆ ಮುಂದಾದರು.

ಏಷ್ಯಾದ ಅತಿ ದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಎಂದೆನಿಸಿಕೊಂಡಿರುವ ದೆಹಲಿಯ ಕೀರ್ತಿನಗರದಲ್ಲಿನ ಕಾರ್ಪೆಂಟರ್ ಜತೆಗೆ ಮಾತನಾಡಿದ ರಾಹುಲ್ ಕಾರ್ಪೆಂಟರ್‌ಗಳ ಸಮಸ್ಯೆಗಳನ್ನು ಆಲಿಸಿದರು.
























