ಕಾರು ಅಪಘಾತ: ಮಾಜಿ ಸಚಿವ ಆಸ್ಪತ್ರೆಗೆ ದಾಖಲು

0
8

ಯಾದಗಿರಿ: ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಇರುವ ಕಾರು ಯಾದಗಿರಿಯಿಂದ ಕಲಬುರಗಿಗೆ ಬರುವಾಗ ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ. ನಿನ್ನೆ ರಾತ್ರಿ 12:30 ರ ಸುಮಾರಿಗೆ ನಡೆದ ಘಟನೆ, ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ರಸ್ತೆಯ ಮದ್ಯ ಇರುವ ಗುಂಡಿಗೆ ಕಾರಿನ ಟೈರ್ ಬಿಳುತ್ತಿದ್ದ ಹಾಗೆ ಸ್ಕೀಡ್ ಆದ ಕಾರಣ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ, ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಹೀಗೆ ಆಗಿದೆ ಎನ್ನಲಾಗಿದೆ. ಸ್ಥಳೀಯರ ಸಹಕಾರಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಗನ್ ಮ್ಯಾನ್ ಗೆ ಸಣ್ಣ ಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Previous articleಚಿಕ್ಕನಗೌಡರಗೆ ಕಾಂಗ್ರೆಸ್ ಟಿಕೆಟೂ ಅರ್ಧಚಂದ್ರ!
Next articleಹೃದಯಾಘಾತ: ಮಾಜಿ ಶಾಸಕ ನಿಧನ