ರಾಯಚೂರು: ಶಾರ್ಟ್ ಸಕ್ಯೂಟ್‌ನಿಂದ ಕಾಟಲ್ ಮಿಲ್‌ನಲ್ಲಿದ್ದ ಹತ್ತಿ ಬೆಂಕಿಗೆ ಆಹುತಿಯಾಗಿರುವ ಘಟನೆ ಬುಧವಾರ ಸಂಜೆ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ತುಳಸಿ ಕಾಟನ್ ಮಿಲ್‌ನಲ್ಲಿ ನಡೆದಿದೆ. ರೈತರಿಂದ ಖರೀದಿ ಮಾಡಿ ಸಂಗ್ರಹಿಸಿದ್ದ ಸುಮಾರು ಐದಾರು ಲಕ್ಷ ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.