Home ತಾಜಾ ಸುದ್ದಿ ಕಾಂಗ್ರೆಸ್ ಪಕ್ಷ ಸಾಯಬಾರದು: ಜೋಶಿ

ಕಾಂಗ್ರೆಸ್ ಪಕ್ಷ ಸಾಯಬಾರದು: ಜೋಶಿ

0
ಜೋಶಿ

ಕಾಂಗ್ರೆಸ್ ಪಕ್ಷ ಸಾಯಬಾರದು ಎನ್ನುವ ಅಪೇಕ್ಷೆ ನಮಗೂ ಇದೆ. ದೇವರು ಈಗಲಾದರೂ ಕಾಂಗ್ರೆಸ್‌ನವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎರಡು ರಾಜ್ಯದಲ್ಲಿ ಬಿಟ್ಟರೆ ಎಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ಕಾಂಗ್ರೆಸ್ ಪಕ್ಷ ಸಾಯಬಾರದು ಎನ್ನುವ ಅಪೇಕ್ಷೆ ನಮಗೂ ಇದೆ. ಯಾಕೆಂದರೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಕ್ಕಾದರೂ ಕಾಂಗ್ರೆಸ್‌ನವರು ಬೇಕು ಎಂದರು.
ಹಿಂದಿನಿಂದಲೂ ತುಷ್ಟೀಕರಣ ಮಾಡಿದ್ದರಿಂದ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲದಾಗಿದೆ. ಯುಪಿಯಲ್ಲಿ ನಿಮಗೆ ಶೂನ್ಯ ಸ್ಥಾನ ಬಂದಿವೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಪಕ್ಷವನ್ನೇ ಹುಡುಕುವ ಸ್ಥಿತಿ ಇದೆ. ಈಶಾನ್ಯದಲ್ಲಿ ಒಬ್ಬ ಸಂಸದರೂ ಇಲ್ಲದಾಗಿದೆ. ಈ ಸ್ಥಿತಿಗೆ ಬಂದು ತಲುಪಿದರೂ ಇನ್ನೂ ಕಾಂಗ್ರೆಸ್‌ನವರಿಗೆ ಬುದ್ದಿ ಬಂದಿಲ್ಲ ಎಂದು ಲೇವಡಿ ಮಾಡಿದರು.

Exit mobile version