ಕನ್ನಡ ಭಾಷೆ ಹೊರಗಿಟ್ಟಿರುವುದು ಖಂಡನೀಯ

0
10

ಬೆಂಗಳೂರು: ಅಂತರರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನ ಮೊದಲ ಹಂತವಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಖಗೋಳಶಾಸ್ತ್ರ ವಿಷಯವಾಗಿ IAPT ನಡೆಸುವ ರಾಷ್ಟ್ರೀಯ ಗುಣಮಟ್ಟದ ಪರೀಕ್ಷೆಯಿಂದ (NSE) ಕನ್ನಡ ಭಾಷೆಯನ್ನು ಹೊರಗಿಟ್ಟಿರುವುದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಖಂಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಭಾಷೆಗಳಿಗೂ ಸಮನಾಂತರ ಸ್ಥಾನಮಾನಗಳಿವೆ. ಕನ್ನಡ ಭಾಷೆಯಲ್ಲಿ ನಮ್ಮ ಮಕ್ಕಳು ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ಅವಕಾಶ ವಂಚಿತರಾಗಿದ್ದಾರೆ. ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Previous articleಸನಾತನ ಧರ್ಮದ‌ ಕುರಿತ ಹೇಳಿಕೆ ಹಿಟ್ಲರ್ ಮನಸ್ಥಿತಿ
Next articleನಾನು ಕಾಂಗ್ರೆಸ್ ಬಿಡುವುದಿಲ್ಲ