ಬೆಂಗಳೂರು: ಮಧುಸೂದನ್ ಸಾಯಿ ವೈದ್ಯಕೀಯ ಸಂಸ್ಥೆ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು. ‘ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು’ ಎಂದು ಭಾಷಣ ಪ್ರಾರಂಭಿಸಿದರು.’ಚಿಕ್ಕಬಳ್ಳಾಪುರ ಆಧುನಿಕ ಭಾರತಕ್ಕೆ ಒಂದು ಮಾದರಿಯಾಗಿದೆ. ಸರ್ ಎಂ ವಿಶ್ವೇಶ್ವರಯ್ಯ ಅವರ ಸ್ಮಾರಕ ಈ ನೆಲದಲ್ಲಿ ಇದೆ. ಸ್ಮಾರಕ ದರ್ಶನ ಪಡೆದಿರುವುದು ನನ್ನ ಪುಣ್ಯವಾಗಿದೆ’ ಎಂದರು.
‘ಬಿಜೆಪಿ ಸರ್ಕಾರ ದೇಶದ ಅಭಿವೃದ್ದೀಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಕಡಿಮೆ ಸಮಯದಲ್ಲಿ ದೇಶದ ಅಭಿವೃದ್ಧಿ ಆಗುತ್ತಿದೆ. ಸಾಮಾಜಿಕ ಸಂಘಟನೆಗೂ ಸರ್ಕಾರ ಶ್ರಮಿಸುತ್ತಿದೆ. ದಲಿತ, ಬಡವ ಎಲ್ಲಾ ವರ್ಗದ ಜನರ ಸಶಕ್ತೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ ಇತ್ತೀಚಿಗ ಮೆಡಿಕಲ್ ಕಾಲೇಜುಗಳ ಉದ್ಘಾಟನೆಯಾಗುತ್ತಿದೆ. ಕನ್ನಡ ಭಾಷೆ ದೇಶದಲ್ಲಿ ಸಮೃದ್ಧ ಭಾಷೆಯಾಗಿದೆ. ಕನ್ನಡದಲ್ಲೂ ಮೆಡಿಕಲ್ ಶಿಕ್ಷಣ ಇರಬೇಕು. ಬಿಜೆಪಿ ಬಡವರ ಸೇವೆಗೆ ಸದಾ ಸಿದ್ದವಾಗಿದೆ’ ಎಂದು ಮೋದಿ ಅವರು ಕನ್ನಡ ಭಾಷೆಯನ್ನು ಹಾಡಿ ಹೊಗಳಿದರು. ಸತ್ಯಸಾಯಿ ಆಶ್ರಮದಿಂದ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ ನಡೆಯುತ್ತಿದೆ. 2014ಕ್ಕಿಂತ ಮೊದಲು 300ಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು ಇಂದು ದೇಶದಲ್ಲಿ 650ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲೇ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಇವೆ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.