ಕಂಪ್ಲಿ ಶಾಸಕರನ್ನು ಹೊಸ ರೀತಿ ಟೀಕಿಸಿದ ಮಾಜಿ ಶಾಸಕ

0
14
ಕಂಪ್ಲಿ

ಬಳ್ಳಾರಿ: ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಹಮ್ಮಿಕೊಂಡಿರುವುದನ್ನು ಮಾಜಿ ಶಾಸಕ, ಬಿಜೆಪಿ ಮುಖಂಡ ಟಿ.ಎಚ್.ಸುರೇಶ್ ಬಾಬು ನವೀನ ರೀತಿಯಲ್ಲಿ ಟೀಕೆ ಮಾಡಿದ್ದಾರೆ.
ಅಸ್ಪತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸುವುದನ್ನು ಕುಟುಕಿ ಅನಿಮೇಶನ್ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಟೀಕಿಸಿರುವ ಸುರೇಶ್ ಬಾಬು, ಕಮೀಶನ್ ಆಸೆಗೆ ಗಣೇಶ್ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದಾರೆ. ಆದರೆ, ಈಗ ಗಣೇಶ್ ಮತ್ತೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

Previous articleಅಪಘಾತ: ಇಬ್ಬರಿಗೆ ಗಂಭೀರ ಗಾಯ
Next articleಮರೆಯಾದ ಸಾಕ್ಷಾತ್ಕಾರ ನಟಿ ಜಮುನಾ