ಓವರಹೆಡ್ ಟ್ಯಾಂಕ್ ನೆಲಸಮ

0
21
ಇಳಕಲ್‌ ಟ್ಯಾಂಕ್‌

ಇಳಕಲ್: 24X7 ನಿರಂತರ ಕುಡಿಯುವ ನೀರು ಪೂರೈಕೆಗಾಗಿ ಕೆಇಬಿ ಹತ್ತಿರದಲ್ಲಿ ನಿರ್ಮಿಸಲಾಗಿದ್ದ ಒವರಹೆಡ್ ಟ್ಯಾಂಕ್‌ನ್ನು ಮಂಗಳವಾರದಂದು ನೆಲಸಮಗೊಳಿಸಲಾಯಿತು . ಕಳೆದ ಎರಡು ವರ್ಷಗಳಿಂದ ಇದು ಉಪಯೋಗಕ್ಕೆ ಬಾರದೇ ಹೋಗಿದ್ದು ಕೃಷ್ಣ ಮೇಲ್ದಂಡೆ ಯೋಜನೆಯ ವತಿಯಿಂದ ಪುನರ್ ನಿರ್ಮಾಣಕ್ಕೆ ಹಣ ಬಿಡುಗಡೆಯಾದ ನಂತರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಒವರಹೆಡ್ ಟ್ಯಾಂಕ್‌ನ್ನು ಕೆಡವಲು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ನಗರಸಭೆ ಸಿಬ್ಬಂದಿ ವರ್ಗ ಮತ್ತು ಟ್ಯಾಂಕ್ ಬೀಳಿಸುವ ಪರಿಣಿತರು ಕೇವಲ ಕೆಲವೇ ನಿಮಿಷಗಳಲ್ಲಿ ಅದನ್ನು ಕೆಡವಿ ಹಾಕಿದರು ಆದರೆ ಅದರಲ್ಲಿ ಗೂಡು ಕಟ್ಟಿದ್ದ ಜೇನು ಹುಳುಗಳು ಗಾಳಿಯಲ್ಲಿ ಹಾರಾಡಿದಾಗ ಅದನ್ನು ನೋಡಲು ನಿಂತ ಜನರೆಲ್ಲಾ ಚೆಲ್ಲಾಪಿಲ್ಲಿಯಾದರು.

Previous articleಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ‌ ಗೃಹ ಸಚಿವರ‌ ಭೇಟಿ, ಪರಿಶೀಲನೆ
Next articleಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್