ಹುಬ್ಬಳ್ಳಿ : ಧಾರವಾಡದಲ್ಲಿ ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಆಗಮಿಸಿದ ಜನ ಬಿಜೆಪಿ ಮುಖಂಡರೊಬ್ಬರು ಹಂಚಲು ತಂದಿದ್ದ ಟೀ ಶರ್ಟ್ ಗಾಗಿ ನೂಕುನುಗ್ಗಲು ಉಂಟಾಗಿದ್ದು ಕಂಡು ಬಂದಿತು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವನ್ನೊಳಗೊಂಡ ಟೀ ಶರ್ಟ್ ಗಳನ್ನು ಮುಖಂಡರೊಬ್ಬರು ಲಾರಿಯಲ್ಲಿ ತಂದು ಕಾರ್ಯಕರ್ತರಿಗೆ ವಿತರಿಸಲು ಮುಂದಾದರು. ಈ ವೇಳೆ ಅಲ್ಲಿ ಜಮಾಯಿಸಿದ ಸಾರ್ವಜನಿಕರು ಟೀ ಶರ್ಟ್ ಪಡೆಯಲು ಮುಗಿ ಬಿದ್ದರು. ಈ ವೇಳೆ ನೂಕುನುಗ್ಗಲು ಕಂದಿತು.ಲಾರಿ ಮೇಲಿಂದ ವ್ಯಕ್ತಿ ಟೀ ಶರ್ಟ್ ಬಿಸಾಕುತ್ತಿದ್ದರೆ ಕೆಳಗಿದ್ದ ಜನ ಅವುಗಳನ್ನು ಕಿತ್ತಾಡಿ ಆರಿಸಿಕೊಂಡರು. ಒಬಗಬ ತುವಕ ಮತ್ತು ಮಹಿಳೆ ಟೀ ಶರ್ಟ್ ಹಿಡಿದು ಜಗ್ಗಾಡಿದ ಘಟನೆಯೂ ನಡೆಯಿತು.
ಸಾರ್ವಜನಿಕರಿಗೆ ಪಲಾವ್ ,ರೈತಾ ಊಟದ ವ್ಯವಸ್ಥೆ: 400 ಜನರಿಂದ ಬಡಿಸುವ ವ್ಯವಸ್ಥೆ
ಹುಬ್ಬಳ್ಳಿ : ಐಐಟಿ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನೂ 3-4 ಕಡೆ ಮಾಡಿದ್ದು, ಅಚ್ಚುಕಟ್ಟಾಗಿ ವಿತರಣೆ ವ್ಯವಸ್ಥೆಯನ್ನು ಮಾಡಲಾಗಿತ್ತು.ಕ್ಯಾಂಪಸ್ ಗೆ ಧಾರವಾಡ ಕಡೆಯಿಂದ ಬರುವವರಿಗೆ, ಹುಬ್ಬಳ್ಳಿ ಬೈ ಪಾಸ್ ಕಡೆಯಿಂದ ಬರುವವರಿಗೆ ಕ್ಯಾಂಪಸ್ ನಲ್ಲಿ ವೇದಿಕೆ ಹತ್ತಿರ ಊಟದ ವ್ಯವಸ್ಥೆ ಮಾಡಲಾಗಿತ್ತು. 120 ಜನ ಬಾಣಸಿಗರು ತಯಾರಿಸಿದ ಪಲಾವ್ ಮತ್ತು ರೈತಾ ವನ್ನು 400 ಕಾರ್ಯಕರ್ತರು ಬಡಿಸುವ ವ್ಯವಸ್ತೆಯನ್ನು ಮಾಡಲಾಗಿತ್ತು